ಬೆಂಗಳೂರು : ಕೈಕಾಲುಗಳ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿದರೆ ಅವುಗಳ ಅಂದ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ನೈಲ್ ಪಾಲಿಶ್ ತೆಗೆದುಕೊಳ್ಳುವಾಗ ಸರಿಯಾದ ಕಲರ್ ಅನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಅದು ನೋಡಲು ಅಸಹ್ಯವಾಗಿ ಕಾಣಿಸುತ್ತದೆ. ಹಾಗಾದ್ರೆ ನಮ್ಮ ಉಗುರುಗಳಿಗೆ ಯಾವರೀತಿ ನೈಲ್ ಪಾಲಿಶ್ ಗಳನ್ನು ಹಚ್ಚಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ಯಾವಾಗಲೂ ನೈಲ್ ಪಾಲಿಶ್ ಗಳನ್ನು ಆಯ್ಕೆ ಮಾಡುವಾಗ ನಮ್ಮ ಸ್ಕೀನ್ ಕಲರ್ ಗೆ ಹೊಂದುವಂತಹ ನೈಲ್ ಪಾಲಿಶ್ ಆರಿಸಿ ಉಗುರುಗಳಿಗೆ ಹಚ್ಚಬೇಕು. ಇದರಿಂದ ಕೈಕಾಲಿನ ಅಂದ ಹೆಚ್ಚುವುದು ಹಾಗೇ ನೋಡಲು ಚೆಂದ ಕಾಣಿಸುವುದು. ಆದ್ದರಿಂದ ದೇಹದ ಬಣ್ಣ ಬಿಳಿಯಾಗಿದ್ದರೆ ಅಂತವರು ನಿಮ್ಮ ಉಗುರುಗಳಿಗೆ ಡಾರ್ಕ್ ಕಲರ್ ನೈಲ್ ಪಾಲಿಶ್ ಹಚ್ಚಬೇಕು. ಅದೇ ದೇಹದ ಬಣ್ಣ ಕಪ್ಪು ಅಥವಾ ಗೋಧಿ ಬಣ್ಣ ಇರುವವರು ಲೈಟ್ ಕಲರ್ ನೈಲ್ ಪಾಲಿಶ್ ಹಚ್ಚಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ