ಬೆಂಗಳೂರು: ನಿಮ್ಮ ಮಕ್ಕಳಿಗೆ ಅಸ್ತಮಾ ಖಾಯಿಲೆಯಿದೆಯಾ? ಹಾಗಿದ್ದರೆ ಅವರ ತೂಕದ ಬಗ್ಗೆಯೂ ನಿಗಾವಹಿಸಿ. ಹೀಗಂತ ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.
ಅಸ್ತಮಾ ಇರುವ ಮಕ್ಕಳಲ್ಲಿ ಬೊಜ್ಜು ದೇಹ ಬರುವ ಸಾಧ್ಯತೆ ಶೇಕಡಾ 50 ರಷ್ಟು ಹೆಚ್ಚಿರುತ್ತದೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರು ಕಂಡುಕೊಂಡಿದ್ದಾರೆ. “ಮಕ್ಕಳಲ್ಲಿ ಅಸ್ತಮಾ ಖಾಯಿಲೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವುದರಿಂದ ಸಣ್ಣ ವಯಸ್ಸಿನಲ್ಲಿ ಬರುವ ಬೊಜ್ಜು ತಪ್ಪಿಸಬಹುದು” ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆಲ್ಲಾ ಕಾರಣ ಅಸ್ತಮಾ ರೋಗಕ್ಕೆ ತೆಗೆದುಕೊಳ್ಳುವ ಔಷಧಿಗಳೂ ಕಾರಣವಾಗಬಹುದಂತೆ. ಅಲ್ಲದೆ ಅಸ್ತಮಾಗೆ ಬಳಸಡುವ ಇನ್ ಹೇಲರ್ ಬೊಜ್ಜು ಬೆಳೆಯುವುದನ್ನುತಡೆಗಟ್ಟುವ ಗುಣವೂ ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಸುಮಾರು 10 ವರ್ಷದ ವಯಸ್ಸಿನ ಮಕ್ಕಳ ಮೇಲೆ ಅಧ್ಯಯನ ನಡೆಸಲಾಗಿದೆ. ಇವರಲ್ಲಿ 15.8 ಶೇಕಡಾ ಮಕ್ಕಳು ಬೊಜ್ಜು ಬೆಳೆಸಿಕೊಂಡಿರುವುದನ್ನು ಸಂಶೋಧಕರು ಗಮನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ