ಬೆಂಗಳೂರು: ಪುರುಷರಿಗೆ ವೀರ್ಯಾಣು ಸೃಷ್ಟಿಗೆ ವೃಷಣದ ಗಾತ್ರ ಮುಖ್ಯವಾಗುತ್ತಾ? ವೃಷಣದ ಗಾತ್ರದಲ್ಲಿ ವ್ಯತ್ಯಾಸವಿದ್ದರೆ ಲೈಂಗಿಕ ಕ್ರಿಯೆ ಕಷ್ಟವಾಗುತ್ತಾ ಎಂಬಿತ್ಯಾದಿ ಆತಂಕಗಳಿರುತ್ತವೆ.
ವೃಷಣದ ಪೈಕಿ ಒಂದು ದೊಡ್ಡದು, ಇನ್ನೊಂದು ಕೊಂಚ ಗಾತ್ರದಲ್ಲಿ ಚಿಕ್ಕದಿದ್ದರೆ ಅದು ಅಸಹಜವೇನೂ ಅಲ್ಲ. ಇದು ಕೆಲವರಲ್ಲಿ ಸಾಮಾನ್ಯವಾಗಿ ಇರುವ ಪ್ರಕ್ರಿಯೆ. ಇದಕ್ಕೆ ಹೆದರಬೇಕಾಗಿಲ್ಲ. ವೃಷಣದ ಗಾತ್ರ ವ್ಯತ್ಯಾಸವಾಗಿರುವುದರಿಂದ ಲೈಂಗಿಕ ಕ್ರಿಯೆಗೆ ಅಥವಾ ವೀರ್ಯಾಣು ಅಭಿವೃದ್ಧಿಗೆ ತೊಂದರೆಯೇನೂ ಆಗಲ್ಲ. ಹಾಗಾಗಿ ಹೆದರಬೇಕಾಗಿಲ್ಲ.