ಬೆಂಗಳೂರು: ಉದ್ದ ಇರುವ ವ್ಯಕ್ತಿಗಳಿಗೆ ಕ್ಯಾನ್ಸರ್ ರೋಗ ಬರುವ ಅಪಾಯವೂ ಹೆಚ್ಚು ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗಪಡಿಸಿದೆ.
ನೀಳ ಕಾಯದ ವ್ಯಕ್ತಿಗಳಲ್ಲಿ ಕ್ಯಾನ್ಸರ್ ರೋಗ ಹರಡಲು ಹೆಚ್ಚು ಜೀವ ಕಣಗಳಿರುತ್ತವೆ. ಇವರು ಸುಲಭವಾಗಿ ಈ ಮಾರಕ ರೋಗಕ್ಕೆ ತುತ್ತಾಗುತ್ತಾರೆ ಎನ್ನುವುದು ಕ್ಯಾಲಿಫೋರ್ನಿಯಾ ವಿವಿಯೊಂದರ ತಜ್ಞರ ಅಭಿಮತ.
ಪುರುಷ ಮತ್ತು ಮಹಿಳೆಯರು ಎಂಬ ಬೇಧವಿಲ್ಲದೆ ಇಂತಹ ವ್ಯಕ್ತಿಗಳಲ್ಲಿ ಕ್ಯಾನ್ಸರ್ ನ ಅಪಾಯ ಶೇ.10 ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.