ಬೆಂಗಳೂರು: ಚಪಾತಿ ಮತ್ತು ಅನ್ನ ಎರಡನ್ನೂ ಸಾಮಾನ್ಯವಾಗಿ ಒಟ್ಟಿಗೇ ಮಾಡುತ್ತೇವೆ. ಹೀಗೆ ಮಾಡುವುದೇಕೆ? ಇವೆರಡನ್ನೂ ಒಟ್ಟಿಗೆ ತಿನ್ನಬಹುದೇ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ತಜ್ಞರ ಪ್ರಕಾರ ಚಪಾತಿ ಮತ್ತು ಅನ್ನವನ್ನು ಜತೆಗೇ ಸೇವಿಸುವುದರಿಂದ ಲಾಭವೂ ಇದೆ, ಕೆಡುಕೂ ಇದೆ. ಲಾಭವೇನು? ಕೆಡುಕೇನು ಎಂದು ತಿಳಿಯೋಣ.
ಚಪಾತಿ ಮತ್ತು ಅನ್ನ ಎರಡೂ ಧಾನ್ಯ ಆಹಾರಗಳಾದ್ದರಿಂದ ಇದರಲ್ಲಿ ಕ್ಯಾಲೋರಿ ಹೆಚ್ಚು. ನಾರಿನಂಶ ಹೇರಳವಾಗಿರುವ ಆಹಾರ ಧಾನ್ಯಗಳಿವು. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಾಕಷ್ಟು ಶಕ್ತಿ ಒದಗಿಸುತ್ತದೆ.
ಆದರೆ ಇದನ್ನು ಸೇವಿಸುವುದು ಇನ್ನೊಂದು ರೀತಿಯಲ್ಲಿ ಒಳ್ಳೆಯದಲ್ಲ ಎನ್ನಲಾಗುತ್ತದೆ. ಎರಡೂ ವಿಭಿನ್ನ ಧಾನ್ಯಗಳನ್ನು ಜತೆಗೇ ಸೇವಿಸುವುದರಿಂದ ಅದರ ಪರಿಣಾಮ ವ್ಯತಿರಿಕ್ತವಾಗುತ್ತದೆ. ಇವೆರಡನ್ನೂ ಸೇವಿಸುವಾಗ ಕನಿಷ್ಠ ಎರಡು ಗಂಟೆಗಳ ವ್ಯತ್ಯಾಸವಿರಬೇಕು.
ಹಾಗಿದ್ದರೆ ಒಟ್ಟಿಗೆ ಸೇವಿಸಬಹುದೇ? ಸೇವಿಸಬಾರದೇ? ಎಂಬ ಸಂಶಯ ನಿಮ್ಮನ್ನು ಕಾಡಬಹುದು. ಎಲ್ಲವೂ ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ. ಕೆಲವು ಜನರಿಗೆ ಇದರಿಂದ ಯಾವುದೇ ಸಮಸ್ಯೆಯಾಗದು. ಹಾಗಿದ್ದರೆ ಜತೆಯಾಗಿ ಸೇವಿಸುವುದಕ್ಕೆ ತೊಂದರೆಯಿಲ್ಲ. ಒಂದು ವೇಳೆ ಸಮಸ್ಯೆ ಎನಿಸಿದರೆ ಆ ಅಭ್ಯಾಸ ಬಿಟ್ಟು ಬಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ