ಬೆಂಗಳೂರು : ಈಗೀಗ ಬ್ರೆಡ್, ಜಾಮ್ ತಿನ್ನುವುದೆಂದರೆ ಅದೇನೋ ಒಂದು ರೀತಿ ಫ್ಯಾಷನ್ ಎಂಬಂತಾಗಿದೆ. ಬೆಳಗ್ಗೆ ಏಳಲು ತಡವಾಯ್ತು, ತಿಂಡಿ ರೆಡಿ ಮಾಡಲು ಸಮಯವಿಲ್ಲ ಎಂದಾಕ್ಷಣ ನೆನಪಿಗೆ ಬರುವುದೇ ಬ್ರೆಡ್, ಜಾಮ್. ಆದರೆ ಈ ಬ್ರೆಡ್ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ.
*ಬಹುತೇಕರು ಬ್ರೆಡ್ ತಯಾರಿಸುವಾಗ ಪೊಟಾಷ್ಯಿಯಂ ಬ್ರೊಮೈಡ್ ಅಥವಾ iodate ಎಂಬ ರಾಸಾಯನಿಕ ಬಳಸುತ್ತಾರೆ. ಈ ಅಂಶ ಆರೋಗ್ಯಕ್ಕೆ ಹಾನಿ ಎಂದು ವಿಜ್ಞಾನ ಮತ್ತು ಪರಿಸರ ಅಧ್ಯಯನ ಕೇಂದ್ರ (CSE) ಹೇಳಿದೆ.
*ಬ್ರೆಡ್ ಬೇಗನೆ ಜೀರ್ಣವಾಗುವುದಿಲ್ಲ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಮಲಬದ್ಧತೆ ಸಮಸ್ಯೆ ಕಾಣಬಹುದು.
* ಹೊಟ್ಟೆ ತುಂಬಲು ತಿನ್ನಬೇಕೇ ಹೊರತು ಇದರಿಂದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ.
* ಡಯಾಬಿಟಿಸ್ ಇರುವವರು ಇದನ್ನು ತಿನ್ನಲೇಬಾರದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚು ಮಾಡುತ್ತದೆ.
* ಬ್ರೆಡ್ ತಿಂದರೆ ಮೈ ತೂಕ ಹೆಚ್ಚುವುದು. ಆದ್ದರಿಂದ ತೆಳ್ಳಗಾಗಬೇಕೆಂದು ಬಯಸುವವರು ಮೈದಾ ಬ್ರೆಡ್ ನಿಂದ ದೂರವಿರುವುದೇ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ