Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರೆಡ್, ಜಾಮ್ ತಿಂದರೆ ಆರೋಗ್ಯಕ್ಕೆ ಉತ್ತಮವೇ? ಇಲ್ಲಿದೆ ನೋಡಿ ಇದಕ್ಕೆ ಉತ್ತರ

ಬ್ರೆಡ್, ಜಾಮ್ ತಿಂದರೆ ಆರೋಗ್ಯಕ್ಕೆ ಉತ್ತಮವೇ? ಇಲ್ಲಿದೆ ನೋಡಿ ಇದಕ್ಕೆ ಉತ್ತರ
ಬೆಂಗಳೂರು , ಬುಧವಾರ, 27 ಜೂನ್ 2018 (13:19 IST)
ಬೆಂಗಳೂರು : ಈಗೀಗ ಬ್ರೆಡ್, ಜಾಮ್ ತಿನ್ನುವುದೆಂದರೆ ಅದೇನೋ ಒಂದು ರೀತಿ ಫ್ಯಾಷನ್ ಎಂಬಂತಾಗಿದೆ. ಬೆಳಗ್ಗೆ ಏಳಲು ತಡವಾಯ್ತು, ತಿಂಡಿ ರೆಡಿ ಮಾಡಲು ಸಮಯವಿಲ್ಲ ಎಂದಾಕ್ಷಣ ನೆನಪಿಗೆ ಬರುವುದೇ ಬ್ರೆಡ್, ಜಾಮ್. ಆದರೆ ಈ ಬ್ರೆಡ್‌ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ.


*ಬಹುತೇಕರು ಬ್ರೆಡ್‌ ತಯಾರಿಸುವಾಗ ಪೊಟಾಷ್ಯಿಯಂ ಬ್ರೊಮೈಡ್‌ ಅಥವಾ iodate ಎಂಬ ರಾಸಾಯನಿಕ ಬಳಸುತ್ತಾರೆ. ಈ ಅಂಶ ಆರೋಗ್ಯಕ್ಕೆ ಹಾನಿ ಎಂದು ವಿಜ್ಞಾನ ಮತ್ತು ಪರಿಸರ ಅಧ್ಯಯನ ಕೇಂದ್ರ (CSE) ಹೇಳಿದೆ.


*ಬ್ರೆಡ್ ಬೇಗನೆ ಜೀರ್ಣವಾಗುವುದಿಲ್ಲ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಮಲಬದ್ಧತೆ ಸಮಸ್ಯೆ ಕಾಣಬಹುದು.

* ಹೊಟ್ಟೆ ತುಂಬಲು ತಿನ್ನಬೇಕೇ ಹೊರತು ಇದರಿಂದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ.

* ಡಯಾಬಿಟಿಸ್‌ ಇರುವವರು ಇದನ್ನು ತಿನ್ನಲೇಬಾರದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚು ಮಾಡುತ್ತದೆ.

* ಬ್ರೆಡ್ ತಿಂದರೆ ಮೈ ತೂಕ ಹೆಚ್ಚುವುದು. ಆದ್ದರಿಂದ ತೆಳ್ಳಗಾಗಬೇಕೆಂದು ಬಯಸುವವರು ಮೈದಾ ಬ್ರೆಡ್‌ ನಿಂದ ದೂರವಿರುವುದೇ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲುಗಳ ಜುಂ ಎನ್ನುವಿಕೆಯನ್ನು ತಡೆಯಲು ಈ ಹಣ್ಣನ್ನು ಸೇವಿಸಿ