ಸೂಕ್ತ ಪ್ರಮಾಣದ ನಿದ್ದೆ ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದದ್ದು, ಇತ್ತೀಚಿನ ಯಾಂತ್ರಿಕ ಜೀವನದಲ್ಲಿ ಹಲವರು ಸೂಕ್ತ ಪ್ರಮಾಣದ ನಿದ್ದೆ ಮಾಡದೇ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸುಸ್ತು, ಬೇಜಾರು, ನಿರಾಸಕ್ತಿ ಹೀಗೆ ಹಲವು ಸಮಸ್ಯೆಗಳು ನಿದ್ರಾಹೀನತೆಯಿಂದ ಬರುತ್ತದೆ.
ನಿದ್ರಾಹೀನತೆಯಿಂದ ಇವಷ್ಟೇ ಸಮಸ್ಯೆ ಅಲ್ಲ. ನೀವು ನಿದ್ರೆ ಕಡಿಮೆ ಮಾಡಿದರೆ ಮಿದುಳು ತನ್ನನ್ನ ತಾನು ತಿನ್ನಲು ಆರಂಭಿಸುತ್ತಂತೆ. ನಿದ್ರಾಹೀನತೆಗೊಳಗಾದ ವ್ಯಕ್ತಿಯ ಮೆದುಳಿನ ಸೆಲ್ಸ್ ಸಮೀಪದ ಇತರೆ ಸೆಲ್`ಗಳನ್ನ ತಿನ್ನುತ್ತವಂತೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಈ ಬೆಚ್ಚಿಬೀಳಿಸುವ ಅಂಶಬೆಳಕಿಗೆ ಬಂದಿದೆ ಎಂದು ನ್ಯೂಸ್ ನೇಶನ್ ವರದಿ ಮಾಡಿದೆ.
ಪರಿಪೂರ್ಣ ನಿದ್ರೆ ಮಾಡಿದ ಮತ್ತು ಕಡಿಮೆ ನಿದ್ರಾವಸ್ಥೆಯಲ್ಲಿದ್ದ ಇಲಿಗಳನ್ನ ಬ್ಲಾಕ್ ಫೇಸ್ ಸ್ಕ್ಯಾನಿಂಗ್ ಸಾಫ್ಟ್`ವೇರ್ ಬಳಸಿ ಸಮಶೋಧನೆ ನಡೆಸಲಾಗಿದ್ದು, ನಿದ್ರಾಹೀನತೆಗೊಳಗಾದ ಇಲಿಯ ಮೆದುಳಿನ ಸೆಲ್ಸ್ ಮತ್ತಷ್ಟು ಆಕ್ಟಿವ್ ಆಗಿ ಪಕ್ಕದ ಸಿನೋಪ್ಸಿಸ್`ಗಳನ್ನ ತಿನ್ನುತ್ತಿರುವುದು ಬೆಳಕಿಗೆ ಬಂದಿದೆ. ಮೆದುಳಿನ ಒಂದು ಭಾಗದ ಸಿನೋಪ್ಸಿಸ್ ಅನ್ನ ಆಸ್ಟ್ರೋಸೈಟ್ಸ್(ನಿದ್ರಾಹೀನತೆಯಿಂದ ಹೆಚ್ಚು ಕ್ರಿಯಾಶೀಲವಾದ ಸೆಲ್ಸ್) ಅಕ್ಷರಶಃ ತಿಂದು ಮುಗಿಸಿದ್ದವು. ಎನ್ನುತ್ತಾರೆಸಂಶೋಧಕ ಮಿಶೆಲ್ ಬೆಲ್ಲೆಸ್ಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ