ಹಾಗಲಕಾಯಿ ರುಚಿಯಲ್ಲಿ ಕಹಿಯಾದ್ದರೂ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ವಿಟಮಿನ್ ಎ ಮತ್ತು ಸಿ ಜೀವಸತ್ವ, ಥಯಮಿನ್, ಕ್ಯಾಲ್ಸಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್ ಅಲ್ಲದೆ, ಗಂಧಯುಕ್ತ ಬಾಷ್ಟ ಶೀಲ ತೈಲ, ಕೆರೋಟಿನ್, ಗ್ಲೂಕೋಸೈಡ್, ಅಲ್ಕಲೈಡ್, ನೆಪೋನಿನ್ ಮತ್ತು ಬಿಟರ್ಸ್ ಅಂಶಗಳು ಹೇರಳವಾಗಿರುತ್ತದೆ.
* ಹಾಗಲಕಾಯಿ ಲಿವರ್ ಶುದ್ಧೀಕರಿಸುತ್ತದೆ. ಇದು ಯಕೃತ್ತನ್ನು ಶುದ್ಧಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಕರಿಸುತ್ತದೆ.
* ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು.
* ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು.
* ಬಾಯಿ, ನಾಲಗೆಯ ಹುಣ್ಣುಗಳಿಗೆ ಹಾಗಲಕಾಯಿಯ ರಸವನ್ನು ಸ್ವಲ್ಪ ಬಾಯಿಗೆ ಹಾಕಿಕೊಂಡು 1-2 ನಿಮಿಷ ಬಾಯಿ ಮುಕ್ಕಳಿಸಿ ರಸವನ್ನು ಚೆಲ್ಲಿದರೆ ಹುಣ್ಣು ಗುಣವಾಗುತ್ತದೆ.