ಬೆಂಗಳೂರು: ಮದುವೆಯಾಗಿ ವರ್ಷವಾದ ಮೇಲೆ ದಂಪತಿಗಳ ನಡುವೆ ಜಗಳ, ಮನಸ್ತಾಪ ಸಾಮಾನ್ಯ. ಹನಿಮೂನ್ ಪಿರಿಯಡ್ ಮುಗಿದ ಮೇಲೆ ಬರುವ ಈ ಮುನಿಸಿಗೆ ಬೆಸ್ಟ್ ಪರಿಹಾರವೇನು ಗೊತ್ತಾ?
ಮದುವೆಯಾಗಿ ವರ್ಷ ಕಳೆದ ಮೇಲೆ ಒಬ್ಬರ ಮುಖ ಒಬ್ಬರು ನೋಡುವುದರಲ್ಲಿ ಬೋರ್ ಎನಿಸಲು ಆರಂಭವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದು ಇದಕ್ಕಿರುವ ಬೆಸ್ಟ್ ಸೊಲ್ಯೂಷನ್.
ಯಾಕೆಂದರೆ ಒಂದು ಮಗು ಗಂಡ ಹೆಂಡತಿ ನಡುವಿನ ಸಂಬಂಧವನ್ನು ಗಟ್ಟಿ ಮಾಡುವುದಷ್ಟೇ ಅಲ್ಲ, ಇಬ್ಬರನ್ನೂ ಜವಾಬ್ಧಾರಿಯುತವಾಗಿ, ಬ್ಯುಸಿಯಾಗಿರಿಸುತ್ತದೆ. ಇಬ್ಬರೂ ಮಗುವಿನ ಪಾಲನೆಯಲ್ಲಿ ಬ್ಯುಸಿಯಾಗಿರುವಾಗ ಜಗಳವಾಡಲೂ ಪುರುಸೊತ್ತು ಸಿಗಲ್ಲ. ಜೀವನಕ್ಕೂ ಹೊಸ ಉದ್ದೇಶ, ಅರ್ಥ ಸಿಗುತ್ತದೆ.