Webdunia - Bharat's app for daily news and videos

Install App

ದ್ರಾಕ್ಷಿಯ ಪ್ರಯೋಜನಗಳು

Lalsab Kodihal
ಸೋಮವಾರ, 8 ಜನವರಿ 2018 (18:52 IST)
ದ್ರಾಕ್ಷಿಯನ್ನು ಸಾಮಾನ್ಯವಾಗಿ "ಹಣ್ಣುಗಳ ರಾಣಿ" ಎಂದು ಕರೆಯುತ್ತಾರೆ ಮತ್ತು ಈ ಹಣ್ಣಿನ ಬಣ್ಣವನ್ನು ಆಧರಿಸಿ ಮೂರು ವಿಧಗಳಲ್ಲಿ ಇದನ್ನು ವಿಂಗಡಿಸಲಾಗಿದೆ - ಕೆಂಪು, ಹಸಿರು ಹಾಗೂ ನೀಲಿ/ಕಪ್ಪು. ಈ ಅದ್ಭುತ ಮತ್ತು ಸ್ವಾದಿಷ್ಟವಾದ ಹಣ್ಣು ನಿಮ್ಮ ಆರೋಗ್ಯ ಕಾಪಾಡುವಲ್ಲಿ ಎತ್ತಿದ ಕೈ ಮತ್ತು ಲಾಭಗಳು ಅಧಿಕ.

ದ್ರಾಕ್ಷಿಯು ವಿಟಾಮಿನ್ ಸಿ ಅನ್ನು ಹೇರಳವಾಗಿ ಹೊಂದಿದೆ ಹಾಗೂ ತಕ್ಷಣ ಶಕ್ತಿಯನ್ನು ಒದಗಿಸುವ ಸಕ್ಕರೆಯ ಅಂಶವನ್ನು ಸಹ ಹೊಂದಿದೆ ಹಾಗೂ ಉರಿಯೂತ ಕಡಿಮೆ ಮಾಡುವ ಗುಣ ಕೂಡಾ ಇದಕ್ಕೆ ಇದೆ.
 
1. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ
ದ್ರಾಕ್ಷಿಗಳು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ಕ್ಯಾರೋಟಿನಾಯ್ಡ್‌ಗಳಿಂದ ಪಾಲಿಫಿನಾಲ್‌ಗಳವರೆಗೆ ಪ್ರಬಲವಾದ ಫೈಟೊನ್ಯೂಟ್ರಿಯಂಟ್‌ಗಳನ್ನು ಇದು ಒಳಗೊಂಡಿದೆ. ಇದು ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ಸಹ ನೇರವಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 
 
2. ಚರ್ಮದ ಸಮಸ್ಯೆಗಳನ್ನು ತಡೆಗಟ್ಟುತ್ತದೆ
ಇದು ಚರ್ಮದ ವಯಸ್ಸಾಗುವಿಕೆಯನ್ನು ಮತ್ತು ಇತರೆ ಚರ್ಮದ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಇದು ತಡೆಯುತ್ತದೆ ಹಾಗೂ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುವಲ್ಲಿ ಇದು ಸಹಾಯಕವಾಗದೆ. ಪ್ರತಿದಿನ ದ್ರಾಕ್ಷಿಯನ್ನು ಸೇವಿಸುವುದರಿಂದ ಚರ್ಮದ ಸಮಸ್ಯೆಗಳಿಂದ ದೂರವಿರಬಹುದು. ದ್ರಾಕ್ಷಿಯನ್ನು ತಿನ್ನಿ ಹಾಗೂ ಕೋಮಲವಾದ ಚರ್ಮವನ್ನು ನಿಮ್ಮದಾಗಿಸಿಕೊಳ್ಳಿ.
 
3. ಪೊಟ್ಯಾಸಿಯಂನ ಆಗರ
ದ್ರಾಕ್ಷಿಯ ಪೌಷ್ಟಿಕಾಂಶದ ವಿಭಜನೆಯು ಪ್ರತಿ 100 ಗ್ರಾಂಗಳಷ್ಟು ಹಣ್ಣಿನಲ್ಲಿ 191 ಮಿಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಪೊಟ್ಯಾಸಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಸೋಡಿಯಂ ಅಂಶವನ್ನು ಕಡಿಮೆ ಆಗಿ ನಿಮ್ಮ ದೇಹವನ್ನು ಹಲವಾರು ವಿಧಾನಗಳಲ್ಲಿ ಆರೋಗ್ಯವಾಗಿಡುತ್ತದೆ. ಕಡಿಮೆ-ಸೋಡಿಯಂ-ಅಧಿಕ-ಪೊಟ್ಯಾಸಿಯಮ್ ಆಹಾರವು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯದ ಆರೋಗ್ಯಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
 
4. ಕಣ್ಣುಗಳಿಗೆ ಉತ್ತಮ
ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾನಿಲಯವು ಮಾಡಿದ ಅಧ್ಯಯನವೊಂದರ ಪ್ರಕಾರ, ಆಕ್ಸಿಡೀಕರಣದ ಒತ್ತಡವನ್ನು ನೇರವಾಗಿ ಎದುರಿಸಲು ಸೆಲ್ಯುಲಾರ್ ಮಟ್ಟದಲ್ಲಿ ಬದಲಾವಣೆಗಳನ್ನು ಸಂಕೇತಿಸುವುದರಿಂದ ದ್ರಾಕ್ಷಿಗಳು ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೈನಂದಿನ ಆಹಾರದಲ್ಲಿ ದ್ರಾಕ್ಷಿಯನ್ನು ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ರೆಟಿನಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ಗಳನ್ನು ಉಂಟುಮಾಡುತ್ತದೆ, ಇದು ಬೆಳಕಿಗೆ ಪ್ರತಿಕ್ರಿಯಿಸುವ ಜೀವಕೋಶಗಳನ್ನು ಒಳಗೊಂಡಿರುವ ಕಣ್ಣಿನ ಭಾಗವಾಗಿದ್ದು, ಇದನ್ನು ಫೋಟೋರಿಸೆಪ್ಟರ್ ಎಂದು ಕರೆಯಲಾಗುತ್ತದೆ.
 
5. ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವುದರಲ್ಲಿ ರೆಸ್ವೆರಾಟ್ರೋಲ್ ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ, ಹೀಗಾಗಿ ಇದು ಮಾನಸಿಕ ಪ್ರತಿಕ್ರಿಯೆಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ಆಲ್ಝೈಮರ್ನಂತಹ ಮೆದುಳಿನ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಸ್ವಿಜರ್ಲ್ಯಾಂಡ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವು, ಮೆದುಳಿನ ಮೇಲೆ ಪರಿಣಾಮ ಬೀರುವ ಪ್ಲೇಕ್‌ಗಳು ಮತ್ತು ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕಲು ರೆಸ್ವೆರಾಟ್ರೋಲ್ ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
 
6. ಮೊಣಕಾಲುಗಳಿಗೆ ಉತ್ತಮ
ಟೆಕ್ಸಾಸ್ ವುಮನ್ ಯೂನಿವರ್ಸಿಟಿಯ ಅಧ್ಯಯನದ ಪ್ರಕಾರ ಪ್ರತಿದಿನ ದ್ರಾಕ್ಷಿಯ ಸೇವನೆಯು ಮೊಣಕಾಲು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ, ವಿಶೇಷವಾಗಿ ಸಂಧಿವಾತದ ರೋಗಲಕ್ಷಣವನ್ನು ಹೊಂದಿರುವ ಜನರಿಗೆ ದ್ರಾಕ್ಷಿಯು ಸಂಜೀವಿನಿ ಇದ್ದಂತೆಯೆ ಸರಿ. ದ್ರಾಕ್ಷಿಗಳು ಅಧಿಕ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್‌‌‌ಗಳನ್ನು ಹೊಂದಿದ್ದು, ಪ್ರಮುಖ ಮತ್ತು ಲಾಭದಾಯಕವಾದ ಪಾಲಿಫಿನಾಲ್‌ಗಳಾಗಿರುತ್ತವೆ, ಇದು ಕೀಲುಗಳ ನಮ್ಯತೆ ಮತ್ತು ಚಲನಶೀಲತೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.
 
7. ಉರಿಯೂತ ಕಡಿಮೆಗೊಳಿಸುತ್ತದೆ
ದ್ರಾಕ್ಷಿಗಳು ನಮ್ಮ ದೇಹದಲ್ಲಿನ ಉರಿಯೂತದ ಪರಿಣಾಮವನ್ನು ಕಡಿಮೆಗೊಳಿಸುವ ಕೆಲವು ಕಿಣ್ವಗಳನ್ನು ಹೊಂದಿರುತ್ತವೆ ಎಂದು ಕಂಡುಬಂದಿದೆ. ಇದು ಅಪಧಮನಿಗಳ ಆರೋಗ್ಯ ಕಾಪಾಡುವಲ್ಲಿಯೂ ಸಹ ನೇರವಾಗುತ್ತದೆ ಈ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ದೇಹದ ಇತರ ದುರಸ್ತಿ ಕಾರ್ಯಗಳಲ್ಲಿ ನೆರವಾಗುತ್ತದೆ.
 
ಎಲ್ಲಾ ಆರೋಗ್ಯ ಪ್ರಯೋಜನಗಳಲ್ಲದೆ, ದ್ರಾಕ್ಷಿಗಳು ಜೀವಸತ್ವಗಳು ಮತ್ತು ವಿಟಮಿನ್ A, B-6, B-12, C ಮತ್ತು D, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಂಗಳಂತಹ ಅಗತ್ಯ ಖನಿಜಗಳಿಂದ ತುಂಬಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments