ಬೆಂಗಳೂರು : ಲೈಂಗಿಕ ಕ್ರಿಯೆ ಹೆಚ್ಚಿನ ನೆಮ್ಮದಿ ಹಾಗೂ ಸಂತೋಷ ನೀಡುತ್ತದೆ. ಕೆಲವರು ಹೇಗಿದ್ದರೂ ವಿವಾಹವಾಗುತ್ತಿದ್ದೇವೆ, ವಿವಾಹಕ್ಕೂ ಮುನ್ನ ಲೈಂಗಿಕ ಸಂಪರ್ಕ ಹೊಂದುವುದರಲ್ಲಿ ತಪ್ಪೇನಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರೆ ಉಳಿದವರು ವಿವಾಹದ ಬಳಿಕವೇ ಲೈಂಗಿಕ ಕ್ರಿಯೆ ಸರಿ ಎಂಬ ಅಭಿಪ್ರಾಯ ಹೊಂದಿದ್ದಾರೆ. ವಿವಾಹಪೂರ್ವ ಲೈಂಗಿಕ ಸಂಬಂಧದಲ್ಲಿ ತೊಡಗಿದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಿಶ್ಚಿತಾರ್ಥ ಮುಗಿದ ನಂತರ, ವಿವಾಹದ ದಿನದವರೆಗೂ ಸಮಯ ಸಿಕ್ಕಂತೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳುವ ಜೋಡಿಗಳಿದ್ದಾರೆ. ಇಬ್ಬರ ಲೈಂಗಿಕ ಬಯಕೆಗಳೂ ಪರಸ್ಪರ ಪೂರಕವಾಗಿದ್ದರೆ ಸರಿ, ಯಾವುದೇ ತೊಂದರೆಯಿಲ್ಲ,ಆದರೆ ಒಂದು ವೇಳೆ ಇಬ್ಬರಲ್ಲೊಬ್ಬರಿಗೆ ತಮ್ಮ ಸಂಗಾತಿಯಿಂದ ನಿರೀಕ್ಷಿಸಿದಷ್ಟು ಫಲಿತಾಂಶ ಸಿಗದೇ ಇದ್ದರೆ? ವಿವಾಹಕ್ಕೂ ಮುನ್ನ ಈ ಸಂಬಂಧವೇ ಮುರಿದು ಬೀಳುತ್ತದೆ.
ಎಷ್ಟೋ ಜನರಲ್ಲಿ ಲೈಂಗಿಕ ಕ್ರಿಯೆ ಮುಗಿದ ತಕ್ಷಣ ತಮ್ಮ ಸಂಗಾತಿಯಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಇದರಿಂದಲೂ ಕೂಡ ಅವರ ವಿವಾಹಕ ಮುರಿದು ಬೀಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ