ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಬರಿಗಾಲಲ್ಲಿ ನಡೆಯುವವರ ಸಂಖ್ಯೆ ಕಡಿಮೆಯೇ. ಕಾಲಿಗೊಂದು ಚಪ್ಪಲಿ ಹಾಕಿ ನಡೆಯದವರು ಯಾರೂ ಇಲ್ಲ. ಬರಿಗಾಲಲ್ಲಿ ನಡೆಯುವುದರಿಂದ ಹಲವು ಉಪಯೋಗಗಳಿವೆ.
ಹಿಂದಿನ ಕಾಲದವರು ಚಪ್ಪಲಿ ಬಳಸುತ್ತಿದ್ದುದೇ ಕಡಿಮೆ. ಕಲ್ಲು ಮುಳ್ಳುಗಳ ಹಾದಿಯಾದರೂ ಸರಿ. ಬರಿಗಾಲಲ್ಲೇ ನಡೆಯುತ್ತಿದ್ದರು. ನಿಮಗೆ ಗೊತ್ತಾ? ಹೀಗೆ ನಡೆಯುವುದರಿಂದ ಕಾಲಿನ ಅಡಿಭಾಗದಲ್ಲಿರುವ ನರತಂತುಗಳು ಜಾಗೃತವಾಗುತ್ತವೆ.
ನರಮಂಡಲವನ್ನು ಜಾಗೃತಗೊಳಿಸುತ್ತದೆ. ಈಗ ನೆನಪು ಮಾಡಿಕೊಳ್ಳಿ. ಅಯ್ಯಪ್ಪ ವ್ರತಧಾರಿಗಳು ಬರಿಗಾಲಲ್ಲಿ ನಡೆಯಬೇಕೆಂಬ ನಿಯಮಿದೆ. ಇದರ ಹಿಂದೆ ಇಂತಹದ್ದೊಂದು ಉದ್ದೇಶವಿರಲೂಬಹುದು. ಹಾಗಂತ ಸಿಮೆಂಟ್ ನೆಲದ ಮೇಲೆ ನಡೆಯುವ ಪ್ರಯೋಗ ಮಾಡಬೇಡಿ. ಮಣ್ಣಿನ ಹಾದಿಯಲ್ಲಿ ಬರಿಗಾಲಲ್ಲಿ ನಡೆಯುವುದಷ್ಟೇ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ನೆನಪಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ