Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅವಲಕ್ಕಿ ಪೊಂಗಲ್

ಅವಲಕ್ಕಿ ಪೊಂಗಲ್
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (09:46 IST)
ಬೆಂಗಳೂರು : ಅವಲಕ್ಕಿಯಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಅದು ರುಚಿಕರವಾಗಿರುತ್ತದೆ. ಆದಕಾರಣ ಅವಲಕ್ಕಿಯಿಂದ ಪೊಂಗಲ್ ಮಾಡಿ ಸವಿಯಿರಿ.

ಬೇಕಾಗುವ ಸಾಮಾಗ್ರಿಗಳು :  1 ಕಪ್ ಅವಲಕ್ಕಿ, ¼ ಕಪ್ ಹೆಸರು ಬೇಳೆ, 4 ಚಮಚ ತುಪ್ಪ, ¾ ಕಪ್ ಬೆಲ್ಲ, ¼ ಕಪ್ ತೆಂಗಿನಕಾಯಿ, 1ಚಮಚ ಒಣದ್ರಾಕ್ಷಿ, 8 ಗೋಡಂಬಿ, ½ ಚಮಚ ಏಲಕ್ಕಿ ಪುಡಿ, 2 ಕಪ್ ನೀರು.

ಮಾಡುವ ವಿಧಾನ : ಮೊದಲಿಗೆ ಹೆಸರು ಬೇಳೆಯನ್ನು ಬೇಯಿಸಿಕೊಳ್ಳಿ. ಅದು ಬೆಂದ ಬಳಿಕ ಅದಕ್ಕೆ ಅವಲಕ್ಕಿಯನ್ನು ಸೇರಿಸಿ ಮಿಶ್ರಣ ಮಾಡಿ. ಬಳಿಕ ಬೆಲ್ಲವನ್ನು ನೀರಿನೊಂದಿಗೆ ಕರಗಿಸಿ ಆ ಪಾಕವನ್ನು ಈ ಅವಲಕ್ಕಿಯ ಮಿಶ್ರಣಕ್ಕೆ ತುಪ್ಪ ಸೇರಿಸಿ 5 ನಿಮಿಷ ಬೇಯಿಸಿ. ಆಮೇಲೆ ಒಣ ತೆಂಗಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾದಾಗ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿದರೆ ಅವಲಕ್ಕಿ ಪೊಂಗಲ್ ರೆಡಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊರಿಯನ್ ಮಹಿಳೆಯರ ಸೌಂದರ್ಯದ ರಹಸ್ಯ ಏನು ಗೊತ್ತಾ?