ಬೆಂಗಳೂರು : ದಾರಿಯಲ್ಲಿ ಹೋಗುವಾಗ ಕೆಲವೊಮ್ಮೆ ಕಾಲಿಗೆ ಮುಳ್ಳು ಚುಚ್ಚುತ್ತವೆ. ಈ ಮುಳ್ಳನ್ನು ತೆಗೆಯಲು ಈ ಮನೆಮದ್ದನ್ನು ಹಚ್ಚಿ.
ಕಾಲಿಗೆ ಚುಚ್ಚಿದ ಮುಳ್ಳು ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟು ತೆಗೆಯಲು ಪ್ರಯತ್ನಿಸಿದರೂ ಹೊರಗೆ ಬರುವುದಿಲ್ಲ. ಅದನ್ನು ಹಾಗೇ ಇಟ್ಟರೆ ಕಾಲಿಗೆ ಸಮಸ್ಯೆಯಾಗುವ ಸಂಭವವಿರುತ್ತದೆ. ಆಗ ಎಕ್ಕದ ಎಲೆಯ ಹಾಲನ್ನು ಮುಳ್ಳು ಚುಚ್ಚಿರುವ ಸ್ಥಳದಲ್ಲಿ ಹಚ್ಚಿದರೆ ಮುಳ್ಳು ಬೇಗನೆ ಹೊರಗೆ ಬರುತ್ತದೆ.