ಬೆಂಗಳೂರು : ಮುಖ ಕ್ಲೀನ್ ಆಗಿ ಅಂದವಾಗಿರಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಆದರೆ ಮೊಡವೆ, ಸನ್ ಟ್ಯಾನ್ ಮುಂತಾದವುಗಳಿಂದ ಮುಖದಲ್ಲಿ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ ಚಿಂತಿಸುವ ಬದಲು ಈ ಟಿಪ್ಸ್ನ್ನು ಫಾಲೋ ಮಾಡಿ ಕ್ಲೀನ್ ಆದ, ಬೆಳ್ಳಗಿನ ಮುಖ ನಿಮ್ಮದಾಗುತ್ತದೆ.
*ಆಲೂಗಡ್ಡೆಯನ್ನ ಸಣ್ಣಗೆ ತುರಿದುಕೊಂಡು ಅಥವಾ ಸಣ್ಣ ಜಾರ್‍ನಲ್ಲಿ ರುಬ್ಬಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ನಂತರ ಒಂದು ಹತ್ತಿಯ ಉಂಡೆಯನ್ನ ಆಲೂಗಡ್ಡೆ ರಸದಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಮತ್ತೊಮ್ಮೆ ಹಚ್ಚಿ. ಹೀಗೆ ಮೂರರಿಂದ ನಾಲ್ಕು ಬಾರಿ ಮುಖಕ್ಕೆ ರಸವನ್ನ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಮುಖ ತೊಳೆದು ನಂತರ ರೋಸ್‍ವಾಟರ್ ಹಚ್ಚಿಕೊಳ್ಳಿ. ಈ ರೀತಿ ಪ್ರತಿದಿನ 15 ದಿನಗಳವರೆಗೆ ಮಾಡಿ.
* ಪುದೀನಾವನ್ನ ಪೇಸ್ಟ್ ಮಾಡಿಕೊಂಡು ಅದರ ರಸ ತೆಗೆದಿಟ್ಟುಕೊಳ್ಳಿ. ಒಂದು ಹತ್ತಿ ಉಂಡೆಯನ್ನ ಇದರಲ್ಲಿ ಅದ್ದಿ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಮತ್ತೊಮ್ಮೆ ಹಚ್ಚಿ. ಇದೇ ರೀತಿ ಮೂರು ಬಾರಿ ಪುದೀನಾ ರಸವನ್ನ ಮುಖಕ್ಕೆ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಮುಖ ತೊಳೆಯಿರಿ. 15 ದಿನಗಳವರೆಗೆ ಪ್ರತಿದಿನ ಇದನ್ನ ಬಳಸಿ.