ಬೆಂಗಳೂರು: ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಬದಲು ನಮ್ಮ ಅಡುಗೆ ಮನೆಯಲ್ಲೇ ಸಿಗುವ ಆರೋಗ್ಯಕರ ರೋಗನಿರೋಧಕ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಿರಬೇಕು.
ಜೇನು ತುಪ್ಪ
ಜೇನು ತುಪ್ಪ ಎನ್ನುವುದು ಹಲವು ಖಾಯಿಲೆಗಳಿಗೆ ಔಷಧ. ಉಸಿರಾಟದ ತೊಂದರೆ, ಶೀತ ಸಂಬಂಧೀ ಸಮಸ್ಯೆಗಳಿಗೆ ಜೇನು ತುಪ್ಪವನ್ನು ಬಳಸುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರೂ ಜೇನು ತುಪ್ಪ ಸೇವಿಸುವುದು ಉತ್ತಮ.
ಕಹಿಬೇವು
ಚರ್ಮ ರೋಗ, ಮೈ ಕೈ ನೋವಿಗೆ ಕಹಿ ಬೇವಿಗಿಂತ ಬೇರೊಂದು ಮದ್ದಿಲ್ಲ. ಹಲವು ಆಯುರ್ವೇದ ಔಷಧಗಳಲ್ಲಿ ಕಹಿಬೇವಿನ ಬಳಕೆಯಾಗುತ್ತಿದೆ. ಕಹಿಬೇವಿನ ಎಣ್ಣೆ ಮಾಡಿಕೊಂಡು ಹಚ್ಚಿಕೊಂಡರೆ ಮೈ ಕೈ ನೋವಿನ ಎಣ್ಣೆ ಬಳಸಬಹುದು.
ಬೆಳ್ಳುಳ್ಳಿ
ಅಸಿಡಿಟಿಯಿಂದ ಹಿಡಿದು ಹಲ್ಲು ನೋವಿನವರೆಗೂ ಬೆಳ್ಳುಳ್ಳಿ ಮದ್ದು. ಪ್ರತಿನಿತ್ಯ ಬೆಳ್ಳುಳ್ಳಿ ಸೇವಿಸುವುದರಿಂದ ಹೃದಯ ಖಾಯಿಲೆ, ಅಸಿಡಿಟಿ, ರಕ್ತದೊತ್ತಡಗಳಿಂದ ದೂರವಿರಬಹುದು ಎಂದು ಹಲವು ಸಂಶೋಧನೆಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ