Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಡುಗೀನ ಇಂಪ್ರೆಸ್ ಮಾಡ್ಬೇಕಾ..!

ಹುಡುಗೀನ ಇಂಪ್ರೆಸ್ ಮಾಡ್ಬೇಕಾ..!
ಬೆಂಗಳೂರು , ಮಂಗಳವಾರ, 25 ಅಕ್ಟೋಬರ್ 2016 (16:49 IST)
ಬೆಂಗಳೂರು: ಮಗಾ ಅವಳ ಹಿಂದೆ ಅಲೆದು ಅಲೆದು ಸಾಕಾಯ್ತು ಕಣೋ.. ಆದ್ರೆ ಅವಳು ಮಾತ್ರ ನನ್ನ ಕಡೆ ತಿರುಗಿಯೂ ನೋಡಲಿಲ್ಲ.. ಛೇ ಬೇಜಾರಾಗತಿದೆ.. ಇವಳನ್ನ ಇಷ್ಟಪಟ್ಟಷ್ಟು  ಮತ್ಯಾರನ್ನು ಇಷ್ಟ ಪಟ್ಟಿರಲಿಲ್ಲ. ಆದ್ರೆ, ಕೊನೆಗೂ ಬೆನ್ನು ತೋರಿಸಿ ಹೋದ್ಲಲ್ಲ.. ನಿಮ್ಮ ಲೈಫಲ್ಲೂ ಈ ರೀತಿ ಆಗಿದೆಯಾ. ನಿಮ್ಮ ಹುಡುಗಿ ತಿರಸ್ಕರಿಸುತ್ತಿದ್ದಾಳಾ. ಹಾಗಾದ್ರೆ, ಇನ್ಮುಂದೆ ಹಾಗಾಗಲ್ಲ.. ಜಸ್ಟ್ ನಿಮ್ಮ ಹುಡುಗೀನ ಇಂಪ್ರೆಸ್ ಮಾಡಬೇಕಾದ್ರೆ, ಈ ಟಿಪ್ಸ್ಗಳನ್ನ ಫಾಲೋ ಮಾಡಿ.
 

 
1 ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಡಿ
ಬಡಾಯಿ ಕೊಚ್ಚಿಕೊಳ್ಳೋದು ಅಂದ್ರೆ ಹುಡುಗೀರಿಗೆ ಆಗಿ ಬರಲ್ಲ. ಹೀಗಾಗಿ ಹುಡುಗ ಮೊದಲು ಕಲಿಬೇಕಾಗಿದ್ದು ಇದನ್ನೆ. ತನ್ನ ಬಗ್ಗೆ ಇಲ್ಲದ್ದು ಇದ್ದದ್ದನ್ನು ಹುಟ್ಟಿಸಿಕೊಂಡು ಹುಡುಗಿ ಮುಂದೆ ಹೇಳಿಕೊಳ್ಳಬೇಡಿ. ಇದರಿಂದ ಇವನ್ಯಾರೋ ತಿಕ್ಲು ಅಂತಾ ಕಾಣುತ್ತೆ ಅಂತಾ ನೆಗ್ಲೆಟ್ ಮಾಡಿಬಿಡೋ ಚಾನ್ಸ್ ಜಾಸ್ತಿ ಇರುತ್ತೆ.
 
2 ಇಂಪ್ರೆಸ್ಸಿವ್ ಡ್ರೆಸ್ ಧರಿಸಿ
ಈಗಿನ ಜಮಾನದಲ್ಲಿ ಹೊಟ್ಟೆಗೆ ಊಟ ಇಲ್ಲದಿದ್ರೂ ಮೈಮೇಲೆ ಬಟ್ಟೆ ಚೆನ್ನಾಗಿರಬೇಕು..  ಒಂಥರಾ ಮಾರ್ಡನ್ ಗಾದೆಯಾಗ್ಬಿಟ್ಟಿದೆ. ಹುಡುಗೀನ ಇಂಪ್ರೆಸ್ ಮಾಡ್ಬೇಕಂದ್ರೆ ಮೊದಲು ಮೈಮೇಲೆ ಧರಿಸೋ ಬಟ್ಟೆ ಸಖತ್ ಇಂಪ್ರೆಸ್ ಆಗಿರಬೇಕು. ಸ್ವಲ್ಪ ಟ್ರೆಂಡಿ, ಹಾಗೂ ಸ್ಟೈಲಿಶ್ ಲುಕ್ ಇರೋ ಬಟ್ಟೆ ಧರಿಸಬೇಕು. 
 
3 ಮೆಸೆಜ್ಗೆ ಕೂಡಲೇ ರಿಪ್ಲೈ ಬೇಡ
ಯಾರೋ ಒಬ್ಬಳನ್ನ ಇಷ್ಟಪಟ್ಟಿದ್ದೀರಿ ಅವಳನ್ನ ತನ್ನ ಹತ್ತಿರ ಸೆಳೆದುಕೊಳ್ಳಬೇಕಂದ್ರೆ, ಮೊದಲು ಅವಳ ಮೆಸೆಜ್ ಬಂದ ತಕ್ಷಣ ಸ್ವಲ್ಪ ಕೂಲಾಗಿರಿ, ತಕ್ಷಣ ಮೆಸೆಜ್ ಮಾಡ್ಬೇಡಿ. ಯಾಕಂದ್ರೆ ಯಾವ ಹುಡುಗೀನು ಹೀಗೆ ಫಟಾಫಟ್ ಮೆಸೆಜ್ ಮಾಡೋ ಹುಡುಗ್ರನ್ನ ಅಷ್ಟೊಂದು ಇಷ್ಟ ಪಡಲ್ಲ. 
 
4 ಮಾತು ಬೆಳ್ಳಿ ಮೌನ ಬಂಗಾರ
ಫೋನ್ ನಲ್ಲಿ ಮಾತನಾಡಬೇಕಾದರೆ ಹುಚ್ಚರ ಥರ ಏನೆನೂ ತಲೆ ತಿನ್ನಬೇಡಿ, ಯಾಕಂದ್ರೆ ಕಡಿಮೆ ಮಾತಾಡೋರನ್ನ ಹುಡುಗೀರು ತುಂಬಾ ಇಷ್ಟ ಪಡ್ತಾರೆ. ಹೀಗಾಗಿ ಮಾತಾಡೋ ಮುನ್ನ ಸ್ವಲ್ಪ ವಿಚಾರಿಸಿ, ಎಚ್ಚರವಹಿಸಿ ಮಾತನಾಡಿದ್ರೆ ಒಳ್ಳೆಯದು.
 
5 ಡಿಸೆಂಟ್ ಆಗಿದ್ರೆ ಒಳ್ಳೆದು
ಸದಾ ಡಿಸೆಂಟ್ ಇರಿ, ಅಗ್ರೆಸ್ಸಿವ್ನೆಸ್ ಆಗೋದು ಬೇಡ್ವೆ ಬೇಡ.. ಯಾಕಂದ್ರೆ ಇಲ್ಲಿ ಹೃದಯಗಳ ಕೆಲಸ ಶುರುವಿರುತ್ತೆ. ಯಾವುದೇ ಕಾರಣಕ್ಕೂ ಸಿಟ್ಟಾಗೋದು, ಚೂರು ಏನಾದ್ರೂ ರೇಗೋದು ಮಾಡ್ಬೇಡಿ. ಇದರಿಂದ ಹುಡುಗೀಗೆ ಬೇಸರ ಆದ್ರೂ ಆಗಬಹುದು.
 
7 ಮುಖದಲ್ಲಿ ನಗುವಿರಲಿ
ಮುಖದಲ್ಲಿ ಸದಾ ನಗುವಿದ್ರೆ, ಆ ಮುಖದ ಕಳೆನೇ ಬೇರೆ. ಹೀಗಾಗಿ ನೀವು ಇಷ್ಟಪಟ್ಟ ಹುಡುಗಿ ಜೊತೆ ಇದ್ದಾಗ ಸದಾ ಮುಖದಲ್ಲಿ ಒಂದೊಳ್ಳೆ ನಗುವಿರಲಿ. ಯಾಕಂದ್ರೆ ಎಂಥಾ ಕಷ್ಟವನ್ನು ಸಹ ಆ ನಗು ಮರೆಮಾಚುತ್ತೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪು ಅತಿಯಾದ್ರೆ ಆಪತ್ತು !