ಬೆಂಗಳೂರು: ಮಳೆಗಾಲ ಬಂತು. ಜತೆಗೆ, ಶೀತ, ಕೆಮ್ಮೂ ನಾನೂ ಜತೆಗಿದ್ದೇನೆ ಎನ್ನುತ್ತಿದೆ. ಈ ಋತುವಿನ ಸಾಮಾನ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮಾಡಬಹುದಾದ ಮದ್ದು ಯಾವೆಲ್ಲಾ ಎಂದು ನೋಡೋಣ.
ವಿಟಮಿನ್ ಸಿ ಅಂಶದ ಹಣ್ಣಿನ ರಸ
ಕಿತ್ತಳೆ ಹಣ್ಣು, ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು, ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಇವುಗಳ ರಸ ಸೇವನೆ ಮಾಡುತ್ತಿರುವುದು ಒಳ್ಳೆಯದು.
ಈರುಳ್ಳಿ ರಸ
ಕೆಮ್ಮು, ಶೀತದಂತಹ ಸಮಸ್ಯೆಗಳಿಗೆ ನಮ್ಮ ಹಿರಿಯರು ಈರುಳ್ಳಿಯನ್ನು ಸೇವನೆ ಮಾಡುತ್ತಿದ್ದರಂತೆ. ಹಾಗೆಯೇ ಈರುಳ್ಳಿಯ ರಸ ಸೇವನೆ ಮಾಡುತ್ತಿದ್ದರೆ, ಅಲರ್ಜಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಆಪಲ್ ಮತ್ತು ಆಕ್ರೋಟು
ಆಕ್ರೋಟುಕಾಯಿ ಅಥವಾ ವಾಲ್ ನಟ್ ನಲ್ಲಿ ಮ್ಯಾಗ್ನಿಷಿಯಂ ಅಂಶ ಹೆಚ್ಚಿರುವುದರಿಂದ ಸೀನು ಮತ್ತು ಕೆಮ್ಮಿನಂತಹ ಸಮಸ್ಯೆಗಳು ಬಾರದಂತೆ ತಡೆಗಟ್ಟುತ್ತದೆ. ಆಪಲ್ ಕೂಡಾ ಅಲರ್ಜಿ ಸಮಸ್ಯೆಗಳ ನಿಯಂತ್ರಿಸುವ ಗುಣ ಹೊಂದಿದೆ.
ಖಾರದ ಆಹಾರ
ಖಾರ ಪ್ರಿಯರಾದರೆ, ಈ ಋತುವಿನಲ್ಲಿ ನಿಮ್ಮ ನಾಲಿಗೆಗೆ ಕಡಿವಾಣ ಹಾಕುವುದು ಬೇಡ. ಖಾರದ ಆಹಾರ ಸೇವಿಸುವುದರಿಂದ ಮೂಗು ಕಟ್ಟಿಕೊಂಡಂತಿದ್ದರೆ, ಉಸಿರಾಟ ಸಲೀಸಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ