Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತುಂಬಾ ರೋಮ್ಯಾನ್ಸ್ ಮಾಡ್ತೇವೆ ಆದ್ರೂ ಮಕ್ಕಳಾಗಿಲ್ಲ ಯಾಕೆ?

ತುಂಬಾ ರೋಮ್ಯಾನ್ಸ್ ಮಾಡ್ತೇವೆ ಆದ್ರೂ ಮಕ್ಕಳಾಗಿಲ್ಲ ಯಾಕೆ?
ಬೆಂಗಳೂರು , ಬುಧವಾರ, 20 ಮಾರ್ಚ್ 2019 (21:00 IST)
ಸಮಸ್ಯೆ: ಸರ್ ನನಗೀಗ 30 ವರ್ಷ. ನನ್ನ ಯಜಮಾನರಿಗೆ 35 ವರ್ಷವಾಗಿದೆ. ಮದುವೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ. ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ನಾವಿಬ್ರೂ ತುಂಬಾ ಚೆನ್ನಾಗಿ ಸೆಕ್ಸ್ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ. ಆದರೆ ಸಂಭೋಗ ನಡೆಸಿದ ಬಳಿಕ ಯೋನಿಯಿಂದ ವೀರ್ಯ ಹೊರ ಬರುತ್ತದೆ. ಇದರಿಂದ ಮಕ್ಕಳಾಗದಿರಬಹುದೇ? ಪರಿಹಾರ ತಿಳಿಸಿ.

ಸಲಹೆ: ನಿಮಗಿನ್ನೂ ಮದುವೆಯಾಗಿ ಎರಡು ವರ್ಷವಷ್ಟೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ. ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ. ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ. ಸಂಬೋಗದ ನಂತರ ಯೋನಿಯಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ.

ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗ ಹೊಂದದೇ ಇರುವುದೂ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇಂಥ ಸಂದರ್ಭಗಳಿಂದ ಅಂಡಾಣು ಫಲಿತವಾಗುವುದು ಕಷ್ಟವಾಗುತ್ತದೆ. ಒಂದು ಋತುಚಕ್ರದ ನಿಗದಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಲ್ಲಿ ಅಂಡಾಣು ಭ್ರೂಣ ಕಟ್ಟುವಲ್ಲಿ ವಿಫಲವಾಗುತ್ತದೆ. ವಿವಾಹಿತರ ನಡುವೆ ದಿನಗಳಲ್ಲಿ ಮಿಲನವಾಗದೇ ಇರುವಂಥ ಪರಿಸ್ಥಿತಿಗಳಲ್ಲಿ ಗರ್ಭಧಾರಣೆ ಕಷ್ಟವಾಗುತ್ತದೆ. ಇದಲ್ಲದೆ ಡಿಂಭನಾಳದಲ್ಲಿನ ಅಡೆತಡೆಗಳಿಂದಾಗಿ ವೀರ್ಯಾಣುವು ಅಂಡಾಣುವಿನೊಂದಿಗೆ ಸಂಯೋಗವಾಗುವುದು ತಡೆದಂತಾಗುತ್ತದೆ. ಒಂದು ವೇಳೆ ಸಂಯೋಗವಾದರೂ ಸಕಾಲದಲ್ಲಿ ಆಗದೇ ಗರ್ಭಾಶಯದ ಗೋಡೆಗೆ ಭ್ರೂಣ ಕಟ್ಟದಂತೆ ಆಗುತ್ತದೆ.

ಮಹಿಳೆಯರಲ್ಲಿ ಗರ್ಭಾಶಯದಲ್ಲಿ ಅಂಡಾಣು ಉತ್ಪತ್ತಿಯಾಗುತ್ತದೆ. ಆದರೆ ಉತ್ಪತ್ತಿಯಾದ ಅಂಡಾಣುವು ಗರ್ಭಕಟ್ಟುವಂತೆ ಬೇಕಾಗುವ ಗ್ರಂಥಿಯ ಸ್ರವಿಸುವಿಕೆ ಸಾಕಷ್ಟು ಪ್ರಮಾಣದಲ್ಲಿ ಆಗದೇ ಇರುವ ಹಂತ. ಪ್ರೊಜೆಸ್ಟರಾನ್ ಹಾರ್ಮೋನು ಗರ್ಭಕೋಶವನ್ನು ಕಾಪಾಡುವ ಹಾರ್ಮೋನು ಆಗಿದೆ. ಸನ್ನಿವೇಶದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪತ್ತಿ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಆಗ ಫಲಿತ ಅಂಡಾಣುವು ಗರ್ಭಕೋಶದ ಗೋಡೆಗೆ ಅಂಟಿಕೊಳ್ಳುವಲ್ಲಿ ವಿಫಲವಾಗುತ್ತದೆ. ಅನಿಯಮಿತ ಋತುಚಕ್ರದಿಂದಲೂ ಗರ್ಭಧಾರಣೆಗೆ ತಡೆಯುಂಟಾಗಬಹುದು.

webdunia
ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30 ನಂತರ. ಕೆಲವು ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. 30 ನಂತರ ಸಂತಾನೋತ್ಪತ್ತಿಯ ಸಾಮಥ್ರ್ಯ ಕಡಿಮೆಯಾಗುತ್ತ ಹೋಗುತ್ತದೆ. ಗರ್ಭಧಾರಣೆಯ ಸಾಧ್ಯತೆಯೂ ಇಳಿಕೆಯಾಗುತ್ತ ಹೋಗುತ್ತದೆ. 35 ವರ್ಷಗಳನ್ನು ದಾಟಿರುವ ಮಹಿಳೆಯರು 6 ತಿಂಗಳ ಸತತ ಯತ್ನದ ನಂತರವೂ ಗರ್ಭ ಧರಿಸದೇ ಇದ್ದಲ್ಲಿ ತಮ್ಮ ವೈದ್ಯರೊಂದಿಗೆ ಮತ್ತೊಮ್ಮೆ ಸಮಾಲೋಚಿಸುವುದು ಒಳಿತು.



Share this Story:

Follow Webdunia kannada

ಮುಂದಿನ ಸುದ್ದಿ

ಅವರನ್ನು ತುಂಬಾ ಉದ್ರೇಕಿಸಬೇಕೆನಿಸುತ್ತಿದೆ… ತಪ್ಪು ತಿಳಿದ್ರೆ ಏನ್ಮಾಡಲಿ?