ಪ್ರಶ್ನೆ: ನಾನು ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ನನಗಿಬ್ಬರು ಅವಳಿ – ಜವಳಿ ಹೆಣ್ಣು ಮಕ್ಕಳಿದ್ದಾರೆ. ಮದುವೆಯಾದಿ ಒಂದು ವರ್ಷದ ಬಳಿಕ ಸರಕಾರಿ ಕೆಲಸ ಸಿಕ್ಕಿದೆ. ಆದರೆ ನನ್ನತ್ತೆ ರಾಕ್ಷಸಿ ಥರ ವರ್ತನೆ ತೋರುತ್ತಿದ್ದಾರೆ. ಇನ್ನು ಗಂಡನಾದವನು ನನಗೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದವು ಅಂತ ಒಂದು ವರ್ಷದ ಮೇಲಾಯಿತು ನನ್ನ ಜತೆ ಮಲಗೋದನ್ನು ಬಿಟ್ಟು.
ನಾನೂ ಮಕ್ಕಳ ಆರೈಕೆಯಲ್ಲಿ ತೊಡಗಿದ್ದರಿಂದ ಲೈಂಗಿಕ ವಿಷಯಕ್ಕೆ ಆದ್ಯತೆ ಕೊಟ್ಟಿರಲಿಲ್ಲ. ಆದರೆ ನನ್ನ ಗಂಡ ನನಗೆ ಹೆಣ್ಣು ಮಕ್ಕಳು ಜನಿಸಿವೆ ಅನ್ನೋ ಕಾರಣಕ್ಕೆ ನನ್ನ ಜತೆ ಮಲಗೋದನ್ನು ಬಿಟ್ಟಿರೋದಕ್ಕೆ ನಾನು ದುಃಖಿಸುತ್ತಿದ್ದೇನೆ. ಈ ನಡುವೆ ನನ್ನ ಸಹೋದ್ಯೋಗಿಯ ಗಂಡನ ಜಲ ಸಲುಗೆ ಬಳೆದಿದೆ. ಅವರು ಭರ್ಜರಿಯಾಗಿ ಲೈಂಗಿಕ ಸುಖ ನೀಡುತ್ತಿದ್ದಾರೆ. ನನ್ನತ್ತೆ, ಗಂಡನಿಗೆ ನಾನು ಬೇರೊಬ್ಬರೊಂದಿಗೆ ಮಲಗಿ ತಕ್ಕ ಪಾಠ ಕಲಿಸುತ್ತಿದ್ದೇನೆ. ನನಗೆ ಬೇಕಿರೋ ಸುಖ ಪಡೆದುಕೊಳ್ಳುತ್ತಿರುವೆ. ಇದು ತಪ್ಪಾ?
ಉತ್ತರ: ನೀವು ಅತ್ತೆ, ಗಂಡನಿಂದ ನೋವು ಪಡುತ್ತಿರೋದು ನಿಮ್ಮ ಪತ್ರದಿಂದ ಗೊತ್ತಾಗುತ್ತದೆ. ಹೆಣ್ಣು ಹುಟ್ಟಿವೆ ಅನ್ನೋ ಕಾರಣಕ್ಕೆ ನಿಮ್ಮಗಂಡ ನಿಮ್ಮನ್ನು ದೂರ ಮಾಡಿರೋದು ಸರಿಯಲ್ಲ. ಇನ್ನು ನೀವು ಸರಕಾರಿ ಕೆಲಸ ಪಡೆದುಕೊಂಡಿದ್ದೀರಿ.
ಗಂಡ, ಅತ್ತೆ ಸರಿದಾರಿಗೆ ಬರದಿದ್ದರೆ ನಿಮ್ಮದೇ ಸ್ವಂತ ಮಾಡಿಕೊಂಡು ಮಕ್ಕಳೊಂದಿಗೆ ನಿರ್ಭಯವಾಗಿರಿ. ಅದೂ ಆಗದಿದ್ದರೆ ನಿಮ್ಮ ಗಂಡ, ಅತ್ತೆಯ ಮನಸ್ಥಿತಿ ಬದಲಿಸೋಕೆ ಯತ್ನಿಸಿ. ಆದರೆ ಅನೈತಿಕ ಸಂಬಂಧ ಬಿಟ್ಟು ಹೊರಬನ್ನಿ.