ಮುಂಬೈ: ಬೀದಿ ಬದಿ ಸಿಗುವ ಆಹಾರ ಸುರಕ್ಷಿತವಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ ನೋಡಿ. ಅಹಮ್ಮದಾಬಾದ್ ನಲ್ಲಿ ಒಬ್ಬಾತ ಪಾನಿ ಪೂರಿಯ ಪಾನಿಗೆ ಟಾಯ್ಲೆಟ್ ಕ್ಲೀನರ್ ಬೆರೆಸಿ ಸಿಕ್ಕಿ ಬಿದ್ದಿದ್ದಾನೆ.
2009 ರಲ್ಲಿ ಸ್ಥಳೀಯರು ನೀಡಿದ ದೂರಿನನ್ವಯ ಅಹಮ್ಮದಾಬಾದ್ ನ ಲಾಲ್ ದರ್ವಾಜಾ ಪ್ರದೇಶದ ಪಾನಿಪೂರಿ ವ್ಯಾಪಾರಿ ಚೇತನ್ ನಂಜಿ ಮಾರ್ವಾಡಿ ಎಂಬಾತನ ಮೇಲೆ ದೂರು ದಾಖಲಾಗಿತ್ತು. ಈತ ತಾನು ತಯಾರಿಸುತ್ತಿದ್ದ ಪಾನಿಗೆ ಬೇರೇನೋ ಬೆರೆಸುತ್ತಿದ್ದಾನೆಂಬ ಅನುಮಾನದ ಮೇರೆಗೆ ಸ್ಥಳೀಯರು ದೂರು ನೀಡಿದ್ದರು. ಇದೀಗ ಏಳು ವರ್ಷಗಳ ಬಳಿಕ ನ್ಯಾಯಾಲಯ ಸತ್ಯ ಕಂಡುಕೊಂಡಿದೆ.
ಅದರಂತೆ ಆತ ಟಾಯ್ಲೆಟ್ ಕ್ಲೀನರ್ ಬಳಸುತ್ತಿದ್ದುದು ಬೆಳಕಿಗೆ ಬಂದಿದೆ. ಇದೀಗ ಈತನಿಗೆ 6 ತಿಂಗಳ ಜೈಲು ಶಿಕ್ಷೆ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ