ಪ್ರಶ್ನೆ: ನನ್ನ ಸಹೋದರಿ ಕಾಲೇಜಿಗೆ ಹೋಗುತ್ತಿದ್ದಾಳೆ. ಪದವಿ ಓದುತ್ತಿರುವ ಅವಳು ಓದನ್ನು ಮರೆತು ಸದಾ ಮೊಬೈಲ್ ನಲ್ಲೇ ಮುಳುಗಿರುತ್ತಾಳೆ. ಮನೆಗೆ ಬಂದಾಗ ಸಂಜೆ, ರಾತ್ರಿ ಸಮಯ ಓದು ಎಂದರೆ ಅವಳು ಮೊಬೈಲ್ ನಲ್ಲಿ ನೋಡುತ್ತಿರುತ್ತಾಳೆ.
ಒಂದು ದಿನ ನಾನು ಮೊಬೈಲ್ ಪರೀಕ್ಷಿಸಿದಾಗ ಆಕೆ ಡೇಟಿಂಗ್ ಸೈಟ್ ಮತ್ತು ಆ ಥರದ ಸೈಟ್ ಗಳಲ್ಲಿ ನೀಲಿ ವಿಡಿಯೋಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾಳೆ. ಅದರಿಂದ ಆಕೆಯನ್ನ ಹೊರ ಬರುವಂತೆ ಮಾಡುವುದು ಹೇಗೆ? ಪರಿಹಾರ ತಿಳಿಸಿ.
ಉತ್ತರ: ನಿಮ್ಮ ಸಹೋದರಿಯಿಂದ ಮೊಬೈಲ್ ನನ್ನು ಅವೈಡ್ ಮಾಡಿಸಿರಿ. ಅವಳಿಗೆ ಫೋನ್ ಕೊಡಬೇಡಿ. ಅವಳ ಕೈಗೆ ಯಾವುದೇ ರೀತಿ ಸಂಪರ್ಕ ಸಾಧನ ಕೊಡಬೇಡಿ.
ಮನೆಯ ಪರಿಸ್ಥಿತಿ ಹಾಗೂ ಆಕೆಯ ಭವಿಷ್ಯದ ಬಗ್ಗೆ ನಿಧಾನವಾಗಿ ತಿಳಿಸಿ ಹೇಳಿ. ಇಷ್ಟಕ್ಕೂ ಕೇಳದಿದ್ದರೆ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.