Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಗರೇಟ್ ಸೇದುವವರಿಗೊಂದು ಸಲಹೆ: ಈ ವಿಟಮಿನ್ ಸೇವಿಸಿ ಆರೋಗ್ಯ ನಿಮ್ಮದಾಗಿಸಿ

ಸಿಗರೇಟ್ ಸೇದುವವರಿಗೊಂದು ಸಲಹೆ: ಈ ವಿಟಮಿನ್ ಸೇವಿಸಿ ಆರೋಗ್ಯ ನಿಮ್ಮದಾಗಿಸಿ
, ಮಂಗಳವಾರ, 4 ಅಕ್ಟೋಬರ್ 2016 (14:46 IST)
ಸಿಗರೇಟ್, ಬಿಡಿ, ಸಿಗಾರ್ ಚುಟ್ಟಾ ಯಾವುದೇ ಆಗಿರಲಿ ಅದರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ ಎನ್ನುವ ಸಂಗತಿಯನ್ನು ಪದೇಪದೇ ವೈದ್ಯರು ಮಾತ್ರವಲ್ಲದೆ ಹಿತೈಷಿಗಳು ಹೇಳುತ್ತಿರುತ್ತಾರೆ . ಆದರೇ ಒಮ್ಮೆ ಶುರುವಾದ ಅಭ್ಯಾಸ ತುರಿಕೆಯಂತೆ ಬಿಡದೆ ಕಾಡುತ್ತದೆ ಕಂಗಾಲು ಮಾಡುತ್ತದೆ. ಹಾಗೆಂದು ಈ ದುರಭ್ಯಾಸ ಬಿಡಲಿಕ್ಕೆ ಸಾಧ್ಯವಿಲ್ಲ ಎಂದೇನೂ ಇಲ್ಲ, ನೀವು ಮನಸ್ಸು ಮಾಡಬೇಕಷ್ಟೆ ಎನ್ನುವ ಕಿವಿ ಮಾತು ಹೇಳುತ್ತಾರೆ ವೈದ್ಯರು.
ಧೂಮಪಾನ ಮಾಡುವುದನ್ನು ಬಿಡಬೇಕೆಂಬ ಆಶಯ ನಿಮ್ಮದಾಗಿದೆಯೇ ? ಒಳ್ಳೆಯ ಸಂಗತಿ . ನಿಮಗೆ ತಿಳಿದಿದೆ ಧೂಮಪಾನ ಮಾಡುವುದರಿಂದ ನಿಮಗಷ್ಟೆ ಅಲ್ಲದೇ ಸುತ್ತಮುತ್ತಲಿನವರಿಗೆ, ನೀವಿರುವ ಪರಿಸರಕ್ಕೆ ಹಾನಿ ಉಂಟಾಗುತ್ತದೆ. 
 
ನಿಮ್ಮ ಜೊತೆ ಜೊತೆಗೆ ಬೇರೆಯವರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ನಿಮ್ಮ ಬದುಕಿನ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. 
 
ಇಷ್ಟೆಲ್ಲಾ ತೊಂದರೆ ಅನುಭವಿಸುವುದಕ್ಕಿಂತ ಬಿಡುವುದು ವಾಸಿ ಎಂದು ನೀವು ಧೂಮಪಾನ ಮಾಡುವುದನ್ನು ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಿ. ಇದರಿಂದ ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿಯಾಗದು ಎಂದಿದ್ದಾರೆ ತಜ್ಞರು. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
 
ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಗಮನಿಸಿದ್ದಾರೆ.ಅಲ್ಲದೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8 ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. 
 
ವಿಟಮಿನ್ ‘ಇ’ ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಜಗತ್ತಿಗೆ ತಿಳಿಸಿದ್ದಾರೆ.ಇನ್ನೇಕೆ ತಡ !

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ 5 ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಿ