Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ತಿಳಿಯಬೇಕೇ?

ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ತಿಳಿಯಬೇಕೇ?
ಬೆಂಗಳೂರು , ಬುಧವಾರ, 29 ನವೆಂಬರ್ 2017 (11:21 IST)
ಹುಟ್ಟಿದ ಮಕ್ಕಳ ಮೂಲ ಸ್ವಭಾವವನ್ನು ಜ್ಯೋತಿಷ್ಯದ ಮೂಲಕ ಅರಿಯಲು ಸಾಧ್ಯ. ಹುಟ್ಟಿದ ದಿನಾಂಕದ ಮೂಲಕ ಮೂಲಾಂಕವನ್ನು ಕಂಡುಹಿಡಿದು ಆ ಮೂಲಕ ಮೂಲ ಸ್ವಭಾವ ಅರಿಯಲು ಸಾಧ್ಯವಾಗುತ್ತದೆ.

ಹೆತ್ತವರು ತಮ್ಮ ಮಕ್ಕಳ ಮೂಲ ಸ್ವಭಾವವನ್ನು ಮೊದಲೇ ಅರಿತರೆ, ಅವರನ್ನು ತಿದ್ದಿ ತೀಡಲು ಸುಲಭವಾಗುತ್ತದೆ. ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲಾಂಕ ಅರಿತು ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಂಯ್ಯಲು ಇಲ್ಲಿ ಕೆಲವು ಮಾರ್ಗಗಳಿವೆ.
 
ಮೂಲಾಂಕ 1: ಈ ಅಂಕೆಯನ್ನು ಹೊಂದಿದವರು ಅಂದರೆ ಯಾವುದೇ ತಿಂಗಳಿನ 1, 10, 19 ಹಾಗೂ 28 ತಾರೀಕುಗಳಲ್ಲಿ ಜನಿಸಿದ ಮಕ್ಕಳು ಕೋಪ, ಜಿದ್ದು ಸಾಧಿಸುವ ಹಾಗೂ ಅಹಂಕಾರಿ ಸ್ವಭಾವಗಳನ್ನು ಹೊಂದಿರುತ್ತಾರೆ. ಉದ್ಯೋಗ ಸ್ಥಾನದಲ್ಲಿ ಇವರೊಬ್ಬ ಉತ್ತಮ ಅಧಿಕಾರಿಯಾಗಿ ರೂಪುಗೊಳ್ಳಬಹುದು. ಈ ಮಕ್ಕಳನ್ನು ತರ್ಕ, ವಾದದಿಂದ ಅಥವಾ ಬೈದು ಸರಿಮಾಡಲು ಸಾಧ್ಯವಿಲ್ಲ. ಪ್ರೀತಿಯಿಂದ ಬುದ್ಧಿಮಾತು ಹೇಳಿದರೆ ಇವರು ತಿದ್ದಿಕೊಳ್ಳುತ್ತಾರೆ.
 
ಮೂಲಾಂಕ 2: ಈ ಅಂಕೆಯನ್ನು ಹೊಂದಿದವರು ಅಂದರೆ ಯಾವುದೇ ತಿಂಗಳಿನ 2, 11, 20 ಅಥವಾ 29ನೇ ತಾರೀಕಿನಂದು ಜನಿಸಿದವರು ಶಾಂತ, ಭಾವುಕ ಹಾಗೂ ಬುದ್ಧಿವಂತರಾಗಿರುತ್ತಾರೆ. ತಂದೆತಾಯಿಯರ ಸೇವೆ ಮಾಡುತ್ತಾರೆ. ಇವರ ಬಳಿ ದೊಡ್ಡ ಸ್ವರದಲ್ಲಿ ಮಾತನಾಡುವುದು ಸಲ್ಲ. ಶಾಂತ ಹಾಗೂ ಸಮಾಧಾನದಿಂದ ಇವರ ಬಳಿ ಮಾತನಾಡಿದರೆ ಉತ್ತಮ.
 
ಮೂಲಾಂಕ 3: 3, 12, 21 ಅಥವಾ 30ನೇ ತಾರೀಕಿನಂದು ಜನಿಸಿದ ಮಂದಿ ಈ ಅಂಕೆಯನ್ನು ಹೊಂದಿರುತ್ತಾರೆ. ಅವರು ಸಮಾಧಾನಚಿತ್ತ, ಜ್ಞಾನಿ ಹಾಗೂ ಗತ್ತಿನ ವ್ಯಕ್ತಿತ್ವ ಇವರದಾಗಿರುತ್ತದೆ. ಇವರನ್ನು ನಂಬಿಸಬೇಕೆಂದಿದ್ದರೆ, ಸಾಕಷ್ಟು ಜ್ಞಾನ ಹಾಗೂ ಬುದ್ಧಿಮತ್ತೆ ಅಗತ್ಯ.
 
ಮೂಲಾಂಕ 4: 4, 13, 22ನೇ ತಾರೀಕುಗಳಂದು ಜನಿಸಿದ ಮಂದಿ ಈ ಅಂಕೆಯನ್ನು ಮೂಲಾಂಕವಾಗಿ ಹೊಂದಿರುತ್ತಾರೆ. ಇವರು ಸ್ವಲ್ಪ ಬೇಜವಾಬ್ದಾರಿ, ಪೋಕರಿ ಹಾಗೂ ಸದಾ ರಿಸ್ಕ್ ತೆಗೆದುಕೊಳ್ಳುವ ಮನೋಸ್ಥಿತಿ ಹೊಂದಿರುತ್ತಾರೆ. ಇವರ ಮೇಲೆ ಸ್ವಲ್ಪ ನಿಗಾ ಇಡುವುದು ಒಳ್ಳೆಯದು. ಯಾಕೆಂದರೆ ಇವರು ಸುಲಭವಾಗಿ ಚಟ, ವ್ಯಸನಗಳಿಗೆ ಬಲಿ ಬೀಳುವ ಸಂಭವ ಹೆಚ್ಚು.
 
ಮೂಲಾಂಕ 5: 5, 14 ಅಥವಾ 23ರಂದು ಜನಿಸಿದ ಮಂದಿ ಇವರಾಗಿದ್ದು, ಬುದ್ಧಿವಂತ, ಸಾಂತ, ಸಂಶೋಧನಾ ಪ್ರವೃತ್ತಿಯ ಮನೋಭಾವ ಇವರದ್ದಾಗಿರುತ್ತದೆ. ಇವರ ಬಳಿ ಮಾತನಾಡುವುದಿದ್ದರೆ, ಧೈರ್ಯ ಹಾಗೂ ಶಾಂತಿಯಿಂದ ಮಾತನಾಡಬೇಕು.
 
ಮೂಲಾಂಕ 6: 6, 15 ಅಥವಾ 24ರಂದು ಜನಿಸಿದ ಈ ಮಂದಿ ಸದಾ ನಗುಮೊಗದ, ಚಿಂತೆಯಿಲ್ಲದ, ಕಾಲವನ್ನು ಚೆನ್ನಾಗಿ ಅನುಭವಿಸುವ ಮನೋಭಾವದವರು. ಚೆನ್ನಾಗಿ ತಿನ್ನಿ, ಕುಡಿಯಿರಿ, ಮಜಾ ಮಾಡಿ ಎಂಬುದರಲ್ಲಿ ನಂಬಿಕೆಯಿಟ್ಟ ಮಂದಿ ಇವರು. ಇವರಿಗೆ ಉತ್ತಮ ಸಂಸ್ಕೃತಿ ಹಾಗೂ ಒಳ್ಳೆಯ ದಿಕ್ಕು ಆರಂಭದಲ್ಲೇ ತೋರಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಗೊತ್ತಾ, ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?