ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೇಳುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಬಹಿರಂಗ ಪ್ರಚಾರಕ್ಕೆ ಇಂದೇ ತೆರೆ ಎಳೆಯಲಿದೆ.
ಪಶ್ಚಿಮ ಬಂಗಾಳದ ಕ್ಷೇತ್ರಗಳಲ್ಲಿ ಮೇ 19 ಕ್ಕೆ ನಡೆಯಬೇಕಾಗಿದ್ದ ಮತದಾನಕ್ಕೆ ಮೇ 17 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಬೇಕಾಗಿತ್ತು.ಆದರೆ ಬಿಜೆಪಿ ಚಾಣಕ್ಯ ಅಮಿತ್ ಷಾ ಮಂಗಳವಾರ ನಡೆಸಿದ ರೋಡ್ ಶೋ ವೇಳೆ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಗಲಾಟೆ, ಮಾರಾಮಾರಿ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಬಹಿರಂಗ ಪ್ರಚಾರದ ಅವಧಿಯನ್ನು ಒಂದು ಮುಂಚಿತವಾಗಿ ಅಂದರೆ ಮೇ 16 ರ ರಾತ್ರಿ 10 ಗಂಟೆಗೆ ನಿಲ್ಲಿಸಿ ಆದೇಶ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.