ಲೋಕಸಭಾ ಎರಡನೇ ಹಂತದ ಕ್ಷೇತ್ರಗಳಿಗೆ ನಿನ್ನೆಯಷ್ಟೇ ಮತದಾನ ನಡೆದಿದ್ದು, ಅಭ್ಯರ್ಥಿಗಳ ಹಣೆಬರಹ ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲ ಇವಿಎಂ ಮಶಿನ್ ಹಾಗೂ ವಿವಿಪ್ಯಾಟ್ ಗಳನ್ನು ಭದ್ರತೆಯಲ್ಲಿ ಇಲ್ಲಿನ ಕೃಷಿ ವಿವಿಯಲ್ಲಿ ತೆರೆಯಲಾಗಿರುವ ಸ್ಟ್ರಾಂಗ್ ರೂಮ್ ನಲ್ಲಿ ಇಡಲಾಗಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ತೆರೆಯಲಾಗಿದ್ದ ಬೂತ್ ಗಳಲ್ಲಿನ ಇವಿಎಂ ಮಶಿನ್ ಗಳನ್ನು ಕೃಷಿ ವಿವಿಯಲ್ಲಿ ಪ್ರತ್ಯೇಕ ರೂಮ್ ಗಳಲ್ಲಿ ಇಡಲಾಗಿದೆ.
ಈ ಸ್ಟ್ರಾಂಗ್ ರೂಮ್ ಗೆ ಬಿಎಸ್ ಎಫ್ ಹಾಗೂ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸ್ಟ್ರಾಂಗ್ ರೂಮ್ ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ್ದಾರೆ.
ಸದ್ಯ ಸ್ಟ್ರಾಂಗ್ ರೂಮ್ ಸೇರಿರುವ ಅಭ್ಯರ್ಥಿಗಳ ಹಣೆಬರಹ ಮೇ.23 ರಂದು ನಿರ್ಧಾರವಾಗಲಿದೆ.