ನವದೆಹಲಿ: ಒಂದು ವೇಳೆ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತರೆ ರಾಜಕೀಯ ನಿವೃತ್ತಿ ಹೇಳುವುದಾಗಿ ಪಂಜಾಬ್ ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ರಾಷ್ಟ್ರೀಯತೆ ಎಂದರೇನು ಎಂಬುದನ್ನು ಸೋನಿಯಾ ಗಾಂಧಿಯನ್ನು ನೋಡಿ ಕಲಿಯಬೇಕು ಎಂದ ನವಜೋತ್, ರಾಹುಲ್ ಗಾಂಧಿ ಸೋತರೆ ರಾಜಯಕೀವನ್ನೇ ತ್ಯಜಿಸುವುದಾಗಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಕಾಂಗ್ರೆಸ್ ಆಡಳಿತದಲ್ಲಿ ದೇಶ ಆರ್ಥಿಕವಾಗಿ ಹಿಂದುಳಿಯಿತು ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಅವರು ರಾಫೇಲ್ ಡೀಲ್ ಅವ್ಯವಹಾರವೇ ಪ್ರಧಾನಿ ಮೋದಿ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ