ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಸೋಲುವ ಲಕ್ಷಣ ಕಾಣುತ್ತಿದೆ. ಒಂದೊಂದು ಸುತ್ತಿನ ಮತ ಎಣಿಕೆ ಮುಕ್ತಾಯವಾದಾಗಲೂ ಘಟಾನುಘಟಿ ನಾಯಕರ ಟೆನ್ಷನ್ ಏರಿಕೆ, ಇಳಿಕೆ ಆಗುತ್ತಿದೆ.
ಮುಖ್ಯವಾಗಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವೆ ಒಂದೊಂದು ಸುತ್ತಿನಲ್ಲೂ ಮುನ್ನಡೆ ಅತ್ತಿತ್ತ ಓಲಾಡುತ್ತಲೇ ಇದೆ. ಇನ್ನೊಂದೆಡೆ ತುಮಕೂರಿನಲ್ಲಿ ಒಂದು ಹಂತದಲ್ಲಿ ಕೂದಲೆಳೆಯ ಮುನ್ನಡೆ ಸಾಧಿಸಿದ್ದ ದೇವೇಗೌಡರು ಈಗ ಭಾರೀ ಹಿನ್ನಡೆ ಅನುಭವಿಸಿದ್ದಾರೆ.
ರಾಷ್ಟ್ರೀಯವಾಗಿ ನೋಡುವುದಾದರೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಹಿನ್ನಡೆ, ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ ಗೆ ಹಿನ್ನಡೆಯಾಗುತ್ತಿದೆ. ಈ ರೀತಿಯ ವೈಪರೀತ್ಯ ನಾಯಕರ ಎದೆಯಲ್ಲಿ ಢವ ಢವ ಸೃಷ್ಟಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ