ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಿಡಿ ಬಿಡುಗಡೆಮಾಡಿದ್ದು, ಭಾರಿ ಚರ್ಚೆಗೆ ಕಾರಣವಾಗುತ್ತಿದೆ.
ಸಿ ಡಿ ಯಲ್ಲಿ ಕೆ.ಎಚ್. ಮುನಿಯಪ್ಪ ಒಕ್ಕಲಿಗರ ಸಮುದಾಯದ ವಿರುದ್ಧ ಮಾತನಾಡಿರುವ ವಿಡಿಯೋ ಕ್ಲಿಪ್ಲಿಂಗ್ ನಲ್ಲಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಜಾತಿ ಪ್ರಮಾಣಪತ್ರ ಊರ್ಜಿತವಾಗಲು ಬಿಡಲ್ಲ ಎಂದು ಹೇಳಿರುವ ಕೆ.ಎಚ್. ಮುನಿಯಪ್ಪ, ಜೆಡಿಎಸ್ ಶಾಸಕ ಕೆ.ಶ್ರಿನಿವಾಸಗೌಡರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ನಾನೇ ಎಂದು ಹೇಳಿದ್ದಾರೆ.
ಎರಡು ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯ ಅಧಿಪತ್ಯ ಜಾಸ್ತಿಯಾಗಿದೆ ಎಂದ ಕೆ.ಎಚ್.ಮುನಿಯಪ್ಪ ಮಾತನಾಡಿದ್ದು, ಪರಿಶಿಷ್ಟ ಜಾತಿ ಮುಖಂಡರೊಬ್ಬರ ಮನೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮಾತನಾಡಿರುವ ವಿಡಿಯೋ ಇದಾಗಿದೆ ಅಂತ ಮಂಜುನಾಥ್ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೊತ್ತೂರು ಮಂಜುನಾಥ್. ನಾಮಪತ್ರ ಪರಿಶೀಲನೆ ನಡೆಯುವ ಒಂದು ದಿನದ ಮುಂಚೆ ಹೈಕೋರ್ಟ್ ನಲ್ಲಿ ಕೊತ್ತೂರು ಮಂಜುನಾಥ್ ರ ಜಾತಿ ಪ್ರಮಾಣ ಪತ್ರ ತಿರಸ್ಕೃತವಾದ ಹಿನ್ನೆಲೆ ನಾಮಪತ್ರ ತಿರಸ್ಕಾರವಾಗಿತ್ತು.
ಮುಳಬಾಗಿಲು ಕ್ಷೇತ್ರದಲ್ಲಿ ತನ್ನ ಎರಡನೇ ಪುತ್ರಿಯನ್ನು ಗೆಲ್ಲಿಸಲು ಕೆ.ಎಚ್. ಮುನಿಯಪ್ಪ ಈ ಎಲ್ಲಾ ನಾಟಕವಾಡಿದ್ರು ಎನ್ನುವುದು ಕೊತ್ತೂರು ಹಾಗೂ ಅವರ ಬೆಂಬಲಿಗರ ಆರೋಪವಾಗಿದೆ.