ಹೌದು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಬಹುಜನ ಸಮಾಜ ಪಕ್ಷದ ಅಭಿಮಾನಿ ಪವನ್ ಕುಮಾರ್(25) ಎಂಬಾತ ಆನೆ ಗುರುತಿನ ಬಹುಜನ ಸಮಾಜ ಪಕ್ಷಕ್ಕೆ ಮತ ಹಾಕುವ ಬದಲು ತಪ್ಪಿ ಕಮಲದ ಗುರುತಿಗೆ ಬಿಜೆಪಿಗೆ ಮತ ಹಾಕಿದ್ದಾನೆ. ನಂತರ ಆತನಿಗೆ ತಾನು ವೋಟ್ ಹಾಕಿದ್ದು ಬಿಜೆಪಿಗೆ, ಬಿಎಸ್ ಪಿಗೆ ಅಲ್ಲ ಎಂಬುದು ತಿಳಿದಿದೆ.
ತಕ್ಷಣ ಮನೆಗೆ ಬಂದ ಆತ ಪಶ್ಚಾತಾಪ ಪಟ್ಟು ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ಇದನ್ನು ಆತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಇದು ಈಗ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.