ಲೋಕಸಭಾ ಚುನಾವಣೆ ಮುಗಿಯುವವರೆಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಎಲೆಕ್ಷನ್ ಮುಗಿಯೋವರ್ಗೂ ಸುಮ್ನೆ ಇರ್ತೀನಿ. ಹೀಗಂತ ಬಿಜೆಪಿ ಶಾಸಕ ಹೇಳಿದ್ದಾರೆ.
ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ನಡುವಿನ ವಾಗ್ವಾದಕ್ಕೆ ತೆರೆ ಎಳೆದಿದ್ದಾರೆ ಶಾಸಕ ನಡಹಳ್ಳಿ.
ಲೋಕಸಭಾ ಚುನಾವಣೆ ಮುಗಿಯುವವರೆಗೂ ಯಾರು ಏನೇ ಟೀಕೆ ಮಾಡಿದರೂ ಪ್ರತ್ಯೂತ್ತರ ನೀಡಲ್ಲ ಎಂದು ಶಾಸಕ ನಡಹಳ್ಳಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಹಾಕಿಸುವ ಮೂಲಕ ವಿರೋಧಿಗಳಿಗೆ ಪಾಠ ಕಲಿಸುವದಾಗಿ ಹೇಳಿದ ನಡಹಳ್ಳಿ, ನನ್ನ ಮೇಲೆ ಎಂ.ಬಿ.ಪಾಟೀಲ್ ಬೆಂಬಲಿಗರು ಹಲ್ಲೆಗೆ ಯತ್ನ ನಡೆಸಿದ್ದರು. ಇದನ್ನು ನನ್ನ ಅಭಿಮಾನಿಗಳು, ಬೆಂಬಲಿಗರು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಇಂದಿನಿಂದ ಲೋಕಸಭಾ ಚುನಾವಣೆಯ ಮತದಾನ ಮುಗಿಯುವವರೆಗೂ ಆ ಘಟನೆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಏನೇ ಟೀಕೆ ಮಾಡಿದರೂ ನನ್ನ ಬಗ್ಗೆ ಏನೇ ಅಂದರೂ ಚುನಾವಣೆ ಮಗಿಯುವವರೆಗೆ ಸಹಿಸಿಕೊಳ್ಳುತ್ತೇನೆ ಎಂದರು.
ನನ್ನ ಅನುಯಾಯಿಗಳು, ಬೆಂಬಲಿಗರು ನನ್ನ ತೀರ್ಮಾನದಂತೆ ನಡೆದುಕೊಳ್ಳಬೇಕು ಎಂದು ನಡಹಳ್ಳಿ ಮನವಿ ಮಾಡಿದ್ದಾರೆ.