ಮೈಸೂರಿನ ಮಹಾರಾಜ ಯದುವೀರ್ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದ್ದು, ಪ್ರವಾಸಿಗರಿಗೆ ಸಿಹಿ ಹಂಚುವ ಮೂಲಕ ಜನರು ಸಂಭ್ರಮಿಸಿದ್ದಾರೆ.
ದಶಕಗಳಿಂದ ಯದುವಂಶದಲ್ಲಿ ಮಕ್ಕಳಾಗಿಲ್ಲ ಎಂಬ ಗುಂಗಿನಲ್ಲಿದ್ದ ಜನ, ಸೋಮವಾರ ಯುವರಾಜನ ಜನನವಾದ ಸುದ್ದಿ ಕೇಳಿ ಸಂಭ್ರಮ ಪಟ್ಟಿದ್ದಾರೆ. ಪಟಾಕಿಗಳನ್ನು ಸಿಡಿಸಿ, ಮೈಸೂರು ಪಾಕ್ ಹಂಚುವ ಮೂಲಕ ಯುವರಾಜನ ಜನನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಅರಮನೆಯ ದ್ವಾರದ ಎದುರು, ಕೆ.ಆರ್.ವೃತ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಯದುವೀರ್ ಹಾಗೂ ತ್ರಿಷಿಕಾ ಅವರಿಗೆ ಶುಭ ಕೋರಿದರು.
ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.