Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನ ಐಕಾನಿಕ್ ಸಿಂಬಾಲ್ ಆಗಿದ್ದ ಶಂಕರ್ ನಾಗ್ ಚಿತ್ರಮಂದಿರ ಕಾರ್ಯಸ್ಥಗಿತ

ಬೆಂಗಳೂರಿನ ಐಕಾನಿಕ್ ಸಿಂಬಾಲ್ ಆಗಿದ್ದ ಶಂಕರ್ ನಾಗ್ ಚಿತ್ರಮಂದಿರ ಕಾರ್ಯಸ್ಥಗಿತ
ಬೆಂಗಳೂರು , ಶನಿವಾರ, 3 ಜೂನ್ 2017 (12:55 IST)
ಬೆಂಗಳೂರು:ಬೆಂಗಳೂರಿನ ಐಕಾನಿಕ್ ಸಿಂಬಾಲ್ ಆಗಿದ್ದ ಎಂಜಿ ರಸ್ತೆಯಲ್ಲಿರುವ ಶಂಕರನಾಗ್ ಚಿತ್ರಮಂದಿರ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಕಾರಣ ಬಿಬಿಎಂಪಿ ಒಡೆತನದಲ್ಲಿರುವ ಈ ಚಿತ್ರಮಂದಿರವನ್ನು ನಿರ್ವಹಿಸುವವರಿಲ್ಲದೇ ಮುಚ್ಚಲ್ಪಟ್ಟಿದೆ.
 
2005ರಲ್ಲೊಮ್ಮೆ ಚಿತ್ರಮಂದಿರ ನಿರ್ವಹಿಸಲು ಪ್ರದರ್ಶಕರು ಮುಂದೆ ಬಾರದ ಹಿನ್ನಲೆಯಲ್ಲಿ ಬೀಗ ಬಿದ್ದಿತ್ತು. ಬಳಿಕ 2009ರಲ್ಲಿ ನವೀಕರಣಗೊಂಡು ಮತ್ತೆ ಚಿತ್ರಮಂದಿರವನ್ನು ಗುತ್ತಿಗೆ ಪಡೆದಿದ್ದರು. ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಪ್ರದರ್ಶನ ಮಾಡಬೇಕು ಎಂಬ ಷರತ್ತಿನ ಮೇಲೆ ಕುಂಟುತ್ತಾ ಸಾಗುತ್ತಾ ಬಂದಿತ್ತು. ಆದರೆ ಈಗ ಚಿತ್ರಮಂದಿರಕ್ಕೆ ಮತ್ತೆ ಬೀಗಹಾಕಲಾಗಿದ್ದು, ಈಬಾರಿ ಶಾಶ್ವತವಾಗಿ ಮುಚ್ಚುವ ಲಕ್ಷಣಗಳು ಗೋಚರಿಸುತ್ತಿದೆ.
 
ಮಲ್ಟಿಫ್ಲೆಕ್ಸ್ ಗಳ ಭರಾಟೆಯಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ನೆಲೆ ಕಳೆದುಕೊಳ್ಳುತ್ತಿವೆ. ಇದೇ ಕಾರಣಕ್ಕೆ ಶಂಕರ್ ನಾಗ್ ಚಿತ್ರಮಂದಿರ ಕೂಡ ಮುಚ್ಚಲಾಗುತ್ತದೆ ಎಂಬುದು ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯ. 
 
ಅದರೆ ಚಿತ್ರ ನಿರ್ಮಾಪಕ, ಪ್ರದರ್ಶಕ ಜಾಕ್ ಮಂಜು ಹೇಳುವ ಪ್ರಕಾರ, ಬಿಬಿಎಂಪಿ ಅಧಿಕಾರಿಗಳ ವರ್ತನೆಯೇ ಚಿತ್ರಮಂದಿರ ಮುಚ್ಚಲು ಕಾರಣ. ನನ್ನಂತೆ ಹಲವರು ನಿರ್ಮಾಪಕರು ಚಿತ್ರಮಂದಿರ ನಿರ್ವಹಿಸಲು ಸಿದ್ಧರಿದ್ದಾರೆ. ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತೇವೆ ಎಂದು ಮೊದಲೆ ಬರೆದುಕೊಡುತ್ತೇವೆ. ಆದರೆ ಚಿತ್ರಮಂದಿರ ಗುತ್ತಿಗೆ ಪಡೆಯುವ ಪ್ರತಿಕ್ರಿಯೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯನ್ನು ನಿರ್ವಹಿಸುವುದು, ಕಷ್ಟದ ಕೆಲಸ. ಏಕಗವಾಕ್ಷಿ ಪದ್ಧತಿ ಮೂಲಕ ಚಿತ್ರ ಮಂದಿರವನ್ನು ನಮಗೆ ನೀಡುವುದಾದರೆ ನಾವು ನಿರ್ವಹಿಸಲು ಸಿದ್ಧ ಎಂದು ಹೇಳುತ್ತಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಅಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆ: ರಾಜನಾಥ್ ಸಿಂಗ್