ವಾರಣಾಸಿ: ಶಿಕ್ಷಕರೆಂದರೆ ದೇವರ ಸಮಾನ ಎಂದು ಗೌರವಿಸುವ ಪರಂಪರೆ ನಮ್ಮದು. ಆದರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯೇ ಅಮಾನವೀಯವಾಗಿ ನಡೆದುಕೊಂಡು ಶಿಕ್ಷಕ ವರ್ಗವೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.
ಉತ್ತರಪ್ರದೇಶದ ಬಾಲಕಿಯರ ಶಾಲೆಯೊಂದರ ಮುಖ್ಯ ಶಿಕ್ಷಕಿಯೊಬ್ಬರು ಹೋಂ ವರ್ಕ್ ಮಾಡದೇ ಬಂದ ವಿದ್ಯಾರ್ಥಿನಿಯರಿಗೆ ಕೊಟ್ಟ ಶಿಕ್ಷೆ ಎಂತಹವರೂ ತಲೆ ತಗ್ಗಿಸುವಂತಹದ್ದು. ಅರೆಬೆತ್ತಲು ಮಾಡಿ ಹೋಂ ವರ್ಕ್ ಮಾಡದ ವಿದ್ಯಾರ್ಥಿನಿಯರನ್ನು ಎರಡು ಗಂಟೆ ಪೆರೇಡ್ ನಡೆಸಿದ್ದಾರೆ.
ಇಷ್ಟೇ ಅಲ್ಲದೆ, ಈ ಅರೆಬೆತ್ತಲೆ ಮೆರವಣಿಗೆಯ ವಿಡಿಯೋವನ್ನೂ ಮಾಡಲಾಗಿದೆ ಎನ್ನಲಾಗಿದೆ. ನೊಂದ ವಿದ್ಯಾರ್ಥಿನಿಯರ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೀಟ್ ಗೆ ದೂರು ನೀಡಿದ್ದು, ತಕ್ಷಣದಿಂದಲೇ ಜಾರಿಯಾಗುವಂತೆ ಶಿಕ್ಷಕಿ ಮೀನಾ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ