ಮುಂಬೈ: ಯಾವಾಗಲೂ ವಿವಾದಿತ ಟ್ವಿಟ್ ಗಳಲ್ಲೇ ಇರುತ್ತಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ.
ವಿವಾದಿತ ಟ್ವಿಟ್ ಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದ ರಾಮ್ ಗೋಪಾಲ್ ವರ್ಮಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದೇ ವೇಳೆ ಏಕಾಏಕಿ ತಮ್ಮ ಫಾಲೋವರ್ಸ್'ಗಳಿಗೆ ಶಾಕ್ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟ್ಟರ್ ಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.
ಇನ್ನು ಮುಂದೆ ಇನ್ ಸ್ಟಾಗ್ರಾಮ್ ನಲ್ಲಿ ಸಕ್ರಿಯನಾಗಿರಲಿದ್ದು, ಫೋಟೋಗಳು ಹಾಗೂ ವಿಡಿಯೋಗಳ ಮೂಲಕವಷ್ಟೇ ಮಾತನಾಡಲು ನಿರ್ಧರಿಸಿದ್ದೇನೆ. ನನ್ನ ಟ್ವಿಟ್ಟರ್ ಖಾತೆ ಸಾಯುತ್ತಿದ್ದು, ಇದು ನನ್ನ ಕೊನೆಯ ಟ್ವೀಟ್ ಎಂದು ಹೇಳಿಕೊಂಡಿದ್ದಾರೆ.