ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ರಿಂಗಣಿಸಿದಾಗ ಅದನ್ನೆತ್ತಿ ನೀವು ಮೊದಲು ಮಾತನಾಡುವ ಶಬ್ಧ 'ಹಲೋ'. ಆದರೆ ಹಲೋವನ್ನೇ ಯಾಕೆ ಹೇಳುತ್ತೇವೆ. ಬೇರೆ ಪದ ಯಾಕಿಲ್ಲ ಎಂದು ನೀವೆಂದಾದರೂ ಯೋಚಿಸಿದ್ದೀರಾ. ಅದರ ಹಿಂದೆ ಕೂಡ ರೋಮಾಂಚನಕಾರಿ ಕರೆ ಇದೆ ಎಂದರೆ ನಂಬುತ್ತೀರಾ?
ಆಕ್ಸಫರ್ಡ್ ಇಂಗ್ಲೀಷ್ ಶಬ್ಧಕೋಶದ ಪ್ರಕಾರ ಹಲೋ ಶಬ್ಧ, ಹಳೆಯ ಜರ್ಮನಿ ಶಬ್ಧ ಹಾಲಾ,ಹೋಲಾದಿಂದ ಹುಟ್ಟಿಕೊಂಡಿದೆ. ಹೋಲಾದ ಅರ್ಥ ಹೇಗಿದ್ದೀರಾ? ಎಂದು. ಪ್ರಾಚೀನ ಕಾಲದಲ್ಲಿ ಸಮುದ್ರದಲ್ಲಿ ಯಾತ್ರೆ ಮಾಡುವ ನಾವಿಕರು ಈ ಪದವನ್ನು ಬಳಸುತ್ತಿದ್ದರು. ಆದರೆ ಫೋನ್‌ಗೆ ಮತ್ತು 'ಹಲೋ'ಗೆ ಏನು ಸಂಬಂಧ. ಇಲ್ಲಿ ಕಥೆಯೇ ಬೇರೆದಿದೆ.
ಫೋನ್ ಆವಿಷ್ಕರಿಸಿದ ಅಲೆಕ್ಸಾಂಡರ್ ಗ್ರಹಾಂ ಬೆಲ್‌ಗೆ ಮಾರ್ಗರೆಟ್ 'ಹಲೋ' ಎಂಬ ಪ್ರೇಯಸಿ ಇದ್ದಳು. ಕಠಿಣ ಪರಿಶ್ರಮದಿಂದ ದೂರವಾಣಿ ಆವಿಷ್ಕರಿಸಿದ ಅವರು ಮೊದಲು ಎರಡು ಫೋನ್ ತಯಾರು ಮಾಡಿ ಅದರಲ್ಲೊಂದನ್ನು ತನ್ನ ಪ್ರೇಯಸಿಗೆ ನೀಡಿದರು. ಬಳಿಕ ಫೋನ್‌ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ತಮ್ಮ ಯೋಜನೆ ಪರಿಪೂರ್ಣವಾದಾಗ ಎಲ್ಲರಿಗಿಂತ ಮೊದಲು ಆಕೆಗೆ ಕರೆ ಮಾಡಿದರು ಮತ್ತು ಎಂದಿನಂತೆ ಪ್ರೀತಿಯಿಂದ 'ಹಲೋ' ಎಂದರು. ಬಳಿಕ ಅವಳಿಗೆ ಫೋನ್ ಮಾಡಿದಾಗಲೆಲ್ಲ 'ಹಲೋ' ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.
ಅವರಿಂದ ಕಂಡುಹಿಡಿಯಲ್ಪಟ್ಟ ಫೋನ್ ಮಾರುಕಟ್ಟೆಗೆ ಬಂದು ಜನರು ಬಳಸಲು ಪ್ರಾರಂಭಿಸಿದಾಗ ಮೊದಲೆಲ್ಲ ‘Are You There?’ ಎಂದೇ ಸಂಭಾಷಣೆಯನ್ನು ಪ್ರಾರಂಭಿಸುತ್ತಿದ್ದರು. ಆದರೆ ಇಷ್ಟೊಂದು ಉದ್ದದ ಪದವನ್ನು ಬಳಸುವುದು ಯಾರಿಗೂ ಇಷ್ಟವಾಗಲಿಲ್ಲ. ಹೀಗಾಗಿ ಗ್ರಹಾಂ ಬೆಲ್‌ನಂತೆ ಎಲ್ಲರೂ 'ಹಲೋ' ಎಂದೇ ಬಳಸತೊಡಗಿದರು.