ಬೆಂಗಳೂರು: ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತ ಸೊಸೆ ಪತಿಯ ಮನೆಯವರ ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ದೂರಿತ್ತಿದ್ದಾಳೆ. ಇಂದಿರಾನಗರದ ಶೃತಿ ಸಂತ್ರಸ್ತೆ.
ಪತಿ ವಿದೇಶದಲ್ಲಿ ಕೆಲಸದಲ್ಲಿದ್ದ. ಈ ವೇಳೆ ಶೃತಿ ಅತ್ತೆ ಮಾವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಳು. ಈ ಸಂದರ್ಭದಲ್ಲಿ ಮಾವ ಸೊಸೆಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಶೃತಿ ಪತಿಗೆ ಹೇಳಿದರೆ, ಆತನೂ ಅಪ್ಪನೊಂದಿಗೆ ಅಡ್ಜಸ್ಟ್ ಮಾಡುವಂತೆ ಹೇಳಿದ್ದಾನೆ.
ತನ್ನನ್ನೂ ವಿದೇಶಕ್ಕೆ ಕರೆದೊಯ್ಯಲು ಹೇಳಿದರೂ ಕೇಳದ ಗಂಡನ ವಿರುದ್ಧ ತಿರುಗಿಬಿದ್ದ ಶೃತಿ ತಾನೇ ವಿದೇಶಕ್ಕೆ ತೆರಳಿದ್ದಳು. ಆದರೆ ಅಲ್ಲಿಗೂ ಹಿಂಬಾಲಿಸಿದ ಮಾವ-ಅತ್ತೆ ಅಲ್ಲಿಯೂ ಕಿರುಕುಳ ಮುಂದುವರಿಸಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ವಾಪಸಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಶೃತಿ ಪತಿ ರಘುನಂದನ್ ಮೇಲೆ ವರದಕ್ಷಿಣೆ ಕಿರುಕುಳ ಕೂಡಾ ದಾಖಲಿಸಲಾಗಿದೆ. ಹಣ ಮತ್ತು ಚಿನ್ನ ನೀಡುವಂತೆ ಆತ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಅತ್ತೆ-ಮಾವನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.