ಉತ್ತರ ಭಾರತದಾದ್ಯಂತ ರಾತ್ರಿ 10 ಗಂಟೆ ಸಮಯದಲ್ಲಿ ಸುಮಾರು 35 ನಿಮಿಷಗಳ ಕಾಲ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ ಜನ ಮನೆ, ಕಚೇರಿ ಬಿಟ್ಟು ಹೊರಗೆ ಓಡಿದ ಘಟನೆ ನಡೆದಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಪ್ರಮಾಣ 5.8 ಎಂದು ದಾಖಲಾಗಿದೆ. ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿ ಭೂಮಿ ಕಂಪಿಸಿದೆ.
ಉತ್ತರಾಖಂಡದ ಪಿತೋರ್‌ಘಡದಲ್ಲಿ ಭೂಮಿಗೆ 21 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರ ಆಧಾರಿತವಾಗಿದೆ ಎಂದು ಗುರುತಿಸಲಾಗಿದೆ. ಘಜಿಯಾಬಾದ್, ಚಂಡಿಗಢ, ಮುಜಫರ್ ನಗರ್, ಮೊರಾಬಾದ್, ಷಹರಾನ್‍ಪುರ್, ರುದ್ರಪ್ರಯಾಗ್ ಮುಂತಾದ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಆದರೆ ಯಾವುದೇ ಆಸ್ತಿ, ಪ್ರಾಣ ಹಾನಿ ಸಂಭವಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.