Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವರಾಜ್ ಸಿಂಗ್ ಗಾದ ಗತಿಯೇ ಧೋನಿಗೆ ಆಗುತ್ತಾ?

ಯುವರಾಜ್ ಸಿಂಗ್ ಗಾದ ಗತಿಯೇ ಧೋನಿಗೆ ಆಗುತ್ತಾ?
ಮುಂಬೈ , ಸೋಮವಾರ, 14 ಆಗಸ್ಟ್ 2017 (06:37 IST)
ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಕ್ತಾಯಗೊಂಡ ಮೇಲೆ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, ಹಿರಿಯ ಯುವರಾಜ್ ಸಿಂಗ್ ಗೆ ಕೊಕ್ ನೀಡಲಾಗಿದೆ.

 
ಈಗಾಗಲೇ ಹಲವು ಬಾರಿ ಹಿರಿಯ ಆಟಗಾರರಾದ ಧೋನಿ ಮತ್ತು ಯುವಿ ಭವಿಷ್ಯದ ಬಗ್ಗೆ ಬೇಗ ತೀರ್ಮಾನವಾಗಬೇಕೆಂದು ಮಾತುಗಳು ಕೇಳಿ ಬಂದಿತ್ತು. ಅದರ ಬೆನ್ನಲ್ಲೇ ಅವರನ್ನು ತಂಡದಿಂದ ಕೈಬಿಟ್ಟಿರುವುದರಿಂದ ಧೋನಿ ಮೇಲೆ ತೂಗುಗತ್ತಿ ನೇತಾಡುತ್ತಿದೆ ಎಂಬ ಸೂಚನೆ ನೀಡಿದೆ.

ಆದರೆ ಧೋನಿ ಈ ಬಾರಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಜೋಡಿ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಹಲವು ದಿನಗಳ ನಂತರ ತಂಡಕ್ಕೆ ಮರಳಿದ್ದಾರೆ. ಯಜುವೇಂದ್ರ ಚಾಹಲ್ ನಿರೀಕ್ಷೆಯಂತೇ ಸ್ಥಾನ ಪಡೆದಿದ್ದಾರೆ. ಅಚ್ಚರಿಯೆಂದರೆ ಯುವ ಪ್ರತಿಭೆ, ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದ್ದ ರಿಷಬ್ ಪಂತ್ ಗೆ ಸ್ಥಾನವೇ ನೀಡಿಲ್ಲ.

ತಂಡ ಇಂತಿದೆ: ವಿರಾಟ್ ಕೊಹ್ಲಿ,  ಧೋನಿ, ಕೆಎಲ್ ರಾಹುಲ್,  ಮನೀಶ್ ಪಾಂಡೆ,  ರೋಹಿತ್ ಶರ್ಮಾ,  ಶಿಖರ್ ಧವನ್,  ರೆಹಾನೆ, ಕೇದಾರ್ ಜಾದವ್,  ಹಾರ್ದಿಕ್ ಪಾಂಡ್ಯ,  ಅಕ್ಸರ್ ಪಟೇಲ್,  ಕುಲದೀಪ್ ಯಾದವ್,  ಯಜುವೇಂದ್ರ ಚಾಹಲ್, ಭುಮ್ರಾ,  ಭುವನೇಶ್ವರ್ ಕುಮಾರ್, ಶಾರ್ದೂಲ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಲಂಕಾ ಟೆಸ್ಟ್ ಸರಣಿ: ಆಕರ್ಷಕ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ