Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದ್ವಿತೀಯ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ಪುಡಿಗಟ್ಟಿದ ಯುವಿ-ಮಹಿ ಜೋಡಿ

ದ್ವಿತೀಯ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ಪುಡಿಗಟ್ಟಿದ ಯುವಿ-ಮಹಿ ಜೋಡಿ
Cuttack , ಶುಕ್ರವಾರ, 20 ಜನವರಿ 2017 (08:57 IST)
ಕಟಕ್: ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಭಾರತಕ್ಕೆ 15 ರನ್ ಗಳಿಂದ ಜಯ ಕೊಡಿಸಿದ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ತಮ್ಮ ದ್ವಿಶತಕದ ಜತೆಯಾಟದಲ್ಲಿ ಹಲವು ದಾಖಲೆ ಪುಡಿಗಟ್ಟಿದರು.

 
ಇದು ಯುವಿಗೆ ವೈಯಕ್ತಿಕ ಗರಿಷ್ಠ ಮೊತ್ತ (150)ವಾಗಿದ್ದರೆ ಧೋನಿಗೆ 10 ನೇ ಏಕದಿನ ಶತಕವಾಗಿತ್ತು. ಇದು ಕಳೆದ 50 ಪಂದ್ಯಗಳ ನಂತರ ಧೋನಿ ದಾಖಲಿಸಿದ ಶತಕವಾಗಿತ್ತು. ಇದಲ್ಲದೆ ಧೋನಿ ಸ್ವದೇಶದಲ್ಲಿ ಸಚಿನ್ ತೆಂಡುಲ್ಕರ್ ನಂತರ 4 ಸಾವಿರ ರನ್ ಪೂರೈಸಿದ ಆಟಗಾರನ ಸಾಲಿಗೆ ಸೇರಿಕೊಂಡರು.

ಒಂದೇ ಪಂದ್ಯದಲ್ಲಿ ಶತಕ ಬಾರಿಸಿದ 35 ಪ್ಲಸ್ ವಯಸ್ಸಿನ 2 ನೇ ಜೋಡಿ ಎಂಬ ದಾಖಲೆಗೆ ಇವರಿಬ್ಬರು ಪಾತ್ರರಾದರು. ಹಿಂದೊಮ್ಮೆ ದಿಲ್ಶನ್ ಮತ್ತು ಸಂಗಕ್ಕಾರ ಈ ಸಾಧನೆ ಮಾಡಿದ್ದರು.  ಯುವಿ-ಮಹಿ ಹಲವು ಬಾರಿ ಶತಕದ ಜತೆಯಾಟವಾಡಿದ್ದಾರೆ. ಇದು ಅವರ 10 ನೇ ಶತಕದ ಜತೆಯಾಟ. ಈ ಸಾಧನೆಗೈದ 5 ನೇ ಭಾರತೀಯ ಜೋಡಿ ಇವರು. ಅಲ್ಲದೆ ಇದು ಐದನೇ ಅತೀ ದೊಡ್ಡ ಜತೆಯಾಟ ಕೂಡ.

ನಾಲ್ಕನೇ ವಿಕೆಟ್ ಗೆ ಅತೀ ಹೆಚ್ಚು ಜತೆಯಾಟವಾಡಿದ ವಿಶ್ವ ದಾಖಲೆ ಮೊಹಮ್ಮದ್ ಅಜರುದ್ದೀನ್- ಜಡೇಜ ಹೆಸರಿನಲ್ಲಿದೆ. ಅವರು 275 ರನ್ ಜತೆಯಾಟವಾಡಿದ್ದರು. ಯುವಿ-ಧೋನಿ 256 ರನ್ ಒಟ್ಟುಗೂಡಿಸುವ ಮೂಲಕ ಎರಡನೇ ಗರಿಷ್ಠ ಜತೆಯಾಟವಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ-ಯುವರಾಜ್ ಸಿಂಗ್ ಶತಕದಬ್ಬರಕ್ಕೆ ಕೊಚ್ಚಿ ಹೋದ ಇಂಗ್ಲೆಂಡ್