ಮುಂಬೈ: ರವಿಚಂದ್ರನ್ ಅಶ್ವಿನ್ ಎಂದರೆ ಈಗ ಯಾರೂ ಮುನಿಸಿಕೊಳ್ಳುವ ಚಾನ್ಸೇ ಇಲ್ಲ. ನಿನ್ನೆಯಷ್ಟೇ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದ ಆಲ್ ರೌಂಡರ್ ರನ್ನು ಎಲ್ಲರೂ ಹೊಗಳುವವರೇ. ಆದರೆ ಎಂಎಸ್ ಧೋನಿ ಅಭಿಮಾನಿಗಳು ಮಾತ್ರ ಸಿಟ್ಟಾಗಿದ್ದಾರೆ. ಕಾರಣವೇನು ಗೊತ್ತಾ?
ಎಲ್ಲದಕ್ಕೂ ಕಾರಣ ಆ ಟ್ವಿಟರ್ ಸಂದೇಶ. ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಅಶ್ವಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ತನ್ನ ಯಶಸ್ಸಿಗೆ ಕಾರಣರಾದವರಿಗೆಲ್ಲಾ ಧನ್ಯವಾದ ಹೇಳಿದ್ದರು. ನನಗೆ ಸಿಕ್ಕಿದ ಈ ಪ್ರಶಸ್ತಿಯನ್ನು ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ. ನನಗೆ ಇದುವರೆಗೆ ಪ್ರೋತ್ಸಾಹವಿತ್ತು ಬೆಳೆಸಿದ ಟೀಂ ಇಂಡಿಯಾ, ಕೋಚ್ ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ ಸಪೋರ್ಟಿಂಗ್ ಸ್ಟಾಫ್ ಎಲ್ಲರಿಗೂ ಧನ್ಯವಾದ ಎಂದು ಅಶ್ವಿನ್ ಟ್ವೀಟ್ ಮಾಡಿದ್ದರು.
ಆದರೆ ಎಲ್ಲೂ ತಮಗೆ ಆರಂಭದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಮಾಡಿಕೊಟ್ಟು ತನ್ನ ಬೆಳವಣಿಗೆಗೆ ಕಾರಣರಾದ ಎಂಎಸ್ ಧೋನಿ ಹೆಸರು ಪ್ರಸ್ತಾಪಿಸಲಿಲ್ಲ. ಇದು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೊಹ್ಲಿಯ ಹೆಸರು ಕೂಡಾ ಹೇಳಿದ ಅಶ್ವಿನ್ ಗೆ ತನ್ನನ್ನು ಟೀಂ ಇಂಡಿಯಾಗೆ ಸೇರುವಂತೆ ಮಾಡಿದ ಧೋನಿ ಹೆಸರು ನೆನಪಾಗಲಿಲ್ಲವೇ ಎಂಬುದು ಅವರ ಕೋಪಕ್ಕೆ ಕಾರಣ. ಧೋನಿ ಅಭಿಮಾನಿಗಳನ್ನು ತಂಪು ಮಾಡಲು ಅಶ್ವಿನ್ ಮುಂದಾಗುತ್ತಾರಾ ಎಂಬುದೇ ಪ್ರಶ್ನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ