ನವದೆಹಲಿ: ಬಿಸಿಸಿಐ ಮೊನ್ನೆಯಷ್ಟೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಾರ್ಷಿಕ ಗುತ್ತಿಗೆ ಪ್ರಕಟಿಸಿತ್ತು. ಈ ಬಾರಿ ಎಲ್ಲಾ ಮಾದರಿಯ ಕ್ರಿಕೆಟ್ ಆಡುವ ಆಟಗಾರರಿಗಾಗಿ ಎ ಪ್ಲಸ್ ಗ್ರೇಡ್ ನೀಡಿದೆ.
ಈ ಉನ್ನತ ದರ್ಜೆಯ ಗ್ರೇಡ್ ನಿಂದ ಧೋನಿಯನ್ನು ಹೊರಗಿಡಲಾಗಿದೆ. ಹೀಗಾಗಿ ಧೋನಿ ಅಭಿಮಾನಿಗಳು ಬೇಸರಿಸಿಕೊಂಡಿದ್ದರು. ಇದಕ್ಕೆ ಬಿಸಿಸಿಐ ಸುಪ್ರೀಂಕೋರ್ಟ್ ನೇಮಿಸಿದ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರೈ ಸ್ಪಷ್ಟನೆ ನೀಡಿದ್ದಾರೆ.
‘ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎ ಪ್ಲಸ್ ಗ್ರೇಡ್ ಮಾಡಬೇಕು ಎಂದು ಐಡಿಯಾ ಕೊಟ್ಟವರೇ ಕೊಹ್ಲಿ ಮತ್ತು ಧೋನಿ. ಎಲ್ಲಾ ಮಾದರಿಯ ಕ್ರಿಕೆಟ್ ಆಡುವವರಿಗೆ ಎ ಪ್ಲಸ್ ದರ್ಜೆ ನೀಡಬೇಕು’ ವೇತನ ಪರಿಷ್ಕರಣೆ ಮನವಿ ಸಂದರ್ಭ ಹೇಳಿಕೊಂಡಿದ್ದರು ವಿನೋದ್ ರೈ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ