ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆದಾಗಿನಿಂದ ತಂಡದಲ್ಲಿ ಹೊಸ ಕಳೆ ಬಂದಿದೆ. ತಂಡವನ್ನು ಒಗ್ಗಟ್ಟಿನಲ್ಲಿಡಲು ಕುಂಬ್ಳೆ ಹೊಸ ಯೋಜನೆ ಹೊಂದಿದ್ದಾರೆ. ಭಾರತ ತಂಡವೂ ಯಶಸ್ಸಿನ ಉತ್ತುಂಗದಲ್ಲಿದೆ. ಆದರೆ ಕುಂಬ್ಳೆಗೆ ಅತಿ ಕಷ್ಟಕರ ಕೆಲಸ ಏನು ಗೊತ್ತಾ?
ಅವರೇ ಹೇಳುವ ಪ್ರಕಾರ ಹುಡುಗರಿಗೆ ಕ್ರಿಕೆಟ್ ಕ್ಲಾಸ್ ತೆಗೆದುಕೊಳ್ಳುವುದು ಅವರಿಗೆ ಕಷ್ಟವಲ್ಲವಂತೆ. ವಿರಾಟ್ ಕೊಹ್ಲಿಯಂತಹ ನಾಯಕನಿರುವಾಗ, ಉತ್ಸಾಹಿ, ಪ್ರತಿಭಾವಂತರ ಆಟಗಾರರಿರುವಾಗ ಅವರಿಗೆ ಪಾಠ ಮಾಡುವ ಕೆಲಸ ಸುಲಭವಾಗುತ್ತದಂತೆ.
ಆದರೆ ಕಷ್ಟವಾಗುವುದೇ ಇಲ್ಲಿ. ಎಲ್ಲರೂ ಪ್ರತಿಭಾವಂತರೇ. ಎಲ್ಲರೂ ಫಾರ್ಮ್ ನಲ್ಲಿರುವವರೇ. ಯಾರನ್ನು ಬಿಡುವುದು ಯಾರನ್ನು ಸೇರಿಸಿಕೊಳ್ಳುವುದು ಎಂಬುದೇ ದೊಡ್ಡ ತಲೆನೋವಂತೆ. ಹಾಗಾಗಿ ಪಂದ್ಯವಿರುವ ದಿನ “ನೀನು ಇಂದಿನ ತಂಡದಲ್ಲಿಲ್ಲ” ಎಂದು ಒಬ್ಬ ಆಟಗಾರನಿಗೆ ನೇರವಾಗಿ ಹೇಳುವುದು ಅವರಿಗೆ ಕಷ್ಟವಾದ ಕೆಲಸವಂತೆ. ಅದು ಬಿಟ್ಟರೆ ಕೋಚ್ ಹುದ್ದೆ ಅವರಿಗೆ ಹೊರೆ ಅನಿಸಿದ್ದೇ ಇಲ್ಲವಂತೆ. ಹಾಗಂತ ಕುಂಬ್ಳೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ