ಕೋಲ್ಕೊತ್ತಾ: ಸೌರವ್ ಗಂಗೂಲಿ ಎಂದರೆ ಧೈರ್ಯವಂತ, ಹುಂಬ ಕ್ರಿಕೆಟಿಗ ಎಂದು ಎಲ್ಲರಿಗೂ ಗೊತ್ತು. ಮೈದಾನದಲ್ಲಿ ಯಾರಿಗೂ ಹೆದರುವ ಜಾಯಮಾನದವರೇ ಅಲ್ಲ. ಅಂತಹ ಕ್ರಿಕೆಟ್ ದಾದ ನನ್ನು ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಸಿದ ಘಟನೆ ನಡೆದಿತ್ತಂತೆ. ಎಲ್ಲಿ ಯಾವಾಗ ಈ ಸ್ಟೋರಿ ಓದಿ.
ಲಂಡನ್ ಅಂಡರ್ ಗ್ರೌಂಡ್ ನಲ್ಲಿ ನವಜೋತ್ ಸಿಂಗ್ ಸಿಧು ಜತೆ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ನಡೆದ ಘಟನೆಯೊಂದನ್ನು ಗಂಗೂಲಿ ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಎದುರು ಕೂತಿದ್ದ ಯುವಕ ಯುವತಿಯರ ಗುಂಪು ಬಿಯರ್ ಕುಡಿಯುತ್ತಾ ಕೂತಿದ್ದರಂತೆ.
ಅವರೊಲ್ಲಬ್ಬ ಗಂಗೂಲಿ ಕಡೆಗೆ ದುರುಗುಟ್ಟಿ ನೋಡುತ್ತಾ, ಕಾಲು ಕೆರೆದು ಜಗಳಕ್ಕೆ ಬರುವವನಂತೆ ನೋಡುತ್ತಿದ್ದನಂತೆ. ಆದರೆ ಗಂಗೂಲಿ ಅವರನ್ನು ಉತ್ತೇಜಿಸಲಿಲ್ಲ. ಕೊನೆಗೆ ಆ ವ್ಯಕ್ತಿ ಬಿಯರ್ ಬಾಟಲ್ ನನ್ನು ಗಂಗೂಲಿ ಮತ್ತು ಸಿದು ಕೂತಿದ್ದ ಕಡೆಗೆ ಎಸೆದಾಗಲೂ ಸಿದು ಪ್ರತಿಕ್ರಿಯಿಸಲು ಹೋದರೂ, ಗಂಗೂಲಿ ಸುಮ್ಮನಿರುವಂತೆ ಹೇಳಿದರಂತೆ.
ಇಷ್ಟಾದ ಮೇಲೆ ಆ ಯುವಕ ಗಂಗೂಲಿ ಕಡೆಗೆ ಬಂದು ಏನು ಹೇಳಿದೆ ನೀನು ಎಂದು ಜಗಳಕ್ಕೆ ಬಂದನಂತೆ. ಹೇಳಿ ಕೇಳಿ ಪಂಜಾಬಿ ಸಿದು. ಕೋಪ ಜಾಸ್ತಿ. ಈತನ ಉದ್ಧಟತನ ನೋಡಿ ಪಿತ್ತ ನೆತ್ತಿಗೇರಿತು. ಸ್ವಲ್ಪ ಜಗಳವಾಯಿತು.
ಹೇಗೋ ಆ ವ್ಯಕ್ತಿಯನ್ನು ಮಣಿಸಿದರೂ, ಒಬ್ಬಾತ ಗಂಗೂಲಿ ನೆತ್ತಿ ಮೇಲೆ ಗನ್ ಗುರಿಯಿಟ್ಟನಂತೆ. ಆಯಿತು ನನ್ನ ಕತೆ ಇಲ್ಲಿಗೇ ಮುಗಿಯಿತು ಎಂದೇ ಗಂಗೂಲಿ ಎಣಿಸಿದ್ದರಂತೆ. ಪುಣ್ಯಕ್ಕೆ ಅವರ ಜತೆಗಿದ್ದ ಯುವತಿಯೊಬ್ಬಳು ಆತನನ್ನು ರೈಲಿನಿಂದ ಹೊರಗೆ ಕರೆದೊಯ್ದಳಂತೆ. ಆಕೆ ಶಕ್ತಿ ನೋಡಿ ಗಂಗೂಲಿಗೆ ಅಚ್ಚರಿಯಾಯಿತಂತೆ. ಅಂತೂ ಜೀವ ಉಳಿಸಿಕೊಂಡೆ ಎಂದು ಆ ಘಟನೆಯನ್ನು ನೆನೆದಿದ್ದಾರೆ ಗಂಗೂಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ