ಮುಂಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಿದವರ ಪೈಕಿ ರವಿ ಶಾಸ್ತ್ರಿ ಕೂಡಾ ಒಬ್ಬರು ಎಂಬುದು ಖಚಿತವಾಗಿದೆ. ಆದರೆ ರವಿ ಶಾಸ್ತ್ರಿ ನಿನ್ನೆ ಮೊನ್ನೆಯಷ್ಟೇ ಅರ್ಜಿ ಹಾಕಿದ್ದಿರಬಹುದು ಎಂದು ನೀವಂದುಕೊಂಡರೆ ತಪ್ಪು.
ನಾಯಕ ವಿರಾಟ್ ಕೊಹ್ಲಿ ಬೆಂಬಲಿತ ರವಿ ಶಾಸ್ತ್ರಿ ಅರ್ಜಿ ಹಾಕಿ ಕೆಲ ದಿನಗಳೇ ಕಳೆದಿವೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ‘ಸೋಮವಾರವಷ್ಟೇ ನಾನು ಅರ್ಜಿ ಹಾಕಿದ್ದೆ ಎಂಬ ವರದಿಗಳು ಸುಳ್ಳು. ನಾನು ಬಹಳ ಹಿಂದೆಯೇ ಅಂದರೆ ಬಿಸಿಸಿಐ ಅರ್ಜಿ ಹಾಕುವ ದಿನಾಂಕವನ್ನು ಜುಲೈ 9 ಕ್ಕೆ ಮುಂದೂಡಿದಾಗಲೇ ಅರ್ಜಿ ಸಲ್ಲಿಸಿದ್ದೆ’ ಎಂದು ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.
ಇದೀಗ ಟಾಮ್ ಮೂಡಿ, ವೀರೇಂದ್ರ ಸೆಹ್ವಾಗ್ ಮತ್ತು ರವಿಶಾಸ್ತ್ರಿ ಪೈಕಿ ಯಾರಾದರೊಬ್ಬರಿಗೆ ಆಯ್ಕೆಗಾರರು ಮಣೆ ಹಾಕಬಹುದು ಎನ್ನಲಾಗಿದೆ. ಮೂಲಗಳ ಪ್ರಕಾರ ಇವರಲ್ಲಿ ಟೀಂ ಇಂಡಿಯಾದ ಮಾಜಿ ನಿರ್ದೇಶಕರಾಗಿಯೂ ಅನುಭವ ಹೊಂದಿರುವ ರವಿ ಶಾಸ್ತ್ರಿಯೇ ಆಯ್ಕೆಯಾಗಬಹುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ