ಮುಂಬೈ: ಟೀಂ ಇಂಡಿಯಾದ ನಾಯಕನಾಗಿ ಟೆಸ್ಟ್ ಕ್ರಿಕೆಟ್ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ನಂತರ ಕೋಚ್ ಆಗಿ ನಾಯಕನೊಂದಿಗಿನ ವೈಮನಸ್ಯದಿಂದಾಗಿ ಹುದ್ದೆ ತ್ಯಜಿಸಬೇಕಾಯಿತು.
ಆದರೆ ಕುಂಬ್ಳೆಯ ಬದ್ಧತೆ, ಕಾರ್ಯವೈಖರಿ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಅಂತಹ ಅದ್ಭುತ ಲೆಕ್ಕಾಚಾರದ ಮನುಷ್ಯ ಅನಿಲ್ ಕುಂಬ್ಳೆ ಮುಂದೊಂದು ದಿನ ರಾಷ್ಟ್ರೀಯ ತಂಡದ ಆಯ್ಕೆಗಾರನಾಗಬೇಕು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
‘ಕುಂಬ್ಳೆ ನಾಯಕರಾಗಿದ್ದಾಗ ಒಮ್ಮೆ ನನ್ನ ಕೊಠಡಿಗೆ ಬಂದು ನೀನು ನಿನ್ನ ಯಾವತ್ತಿನ ಆಟ ಆಡು. ನೀನು ಇಂದು ಚೆನ್ನಾಗಿ ಆಡಿದರೆ ಮುಂದಿನ ಎರಡು ಸರಣಿಗೆ ನಿನ್ನನ್ನು ಡ್ರಾಪ್ ಮಾಡಲ್ಲ ಎಂದು ಭರವಸೆ ನೀಡಿದ್ದರು. ಅವರು ಆಟಗಾರರಲ್ಲಿ ಅಂತಹ ಆತ್ಮವಿಶ್ವಾಸ ತುಂಬುತ್ತಾರೆ. ಅವರು ಮುಂದೊಂದು ದಿನ ರಾಷ್ಟ್ರೀಯ ತಂಡದ ಆಯ್ಕೆಗಾರರ ಮುಖ್ಯಸ್ಥನಾದರೆ ಚೆನ್ನಾಗಿರುತ್ತದೆ’ ಎಂದು ಸೆಹ್ವಾಗ್ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.