ಪುಣೆ: ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅಂದರೆ ಹಾಗೇನೇ. ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನಿಸುತ್ತದೆ. ಅವರ ಬ್ಯಾಟ್ ನಿಂದ ಬರುವ ಒಂದೊಂದು ಹೊಡೆತವೂ ಮನಮೋಹಕ. ನಿನ್ನೆಯ ಅವರ ಶತಕದ ಇನಿಂಗ್ಸ್ ನಲ್ಲೂ ಅಂತಹದ್ದೇ ಹೊಡೆತಗಳು ಬಂದಿದ್ದವು.
ಆದರೆ ಆ ಒಂದು ಸಿಕ್ಸರ್ ಮಾತ್ರ ವಿಶೇಷವಾಗಿತ್ತು. ಭಾರತದ 33 ನೇ ಇನಿಂಗ್ಸ್ ನಲ್ಲಿ ಕೊಹ್ಲಿ ಒಂದು ಸಿಕ್ಸರ್ ಹೊಡೆದಿದ್ದರು. ಆಗ ಭಾರತಕ್ಕೆ ದೊಡ್ಡ ಹೊಡೆತಗಳ ಅಗತ್ಯವಿತ್ತು. ಆದರೆ ವಿಕೆಟ್ ಕೈ ಚೆಲ್ಲುವಂತಿರಲಿಲ್ಲ. ಆ ಸಂದರ್ಭದಲ್ಲಿ ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ಕೊಹ್ಲಿ ಕೈ ಮುಂದಕ್ಕೆ ಚಾಚಿ ಲಾಫ್ಟ್ ಶಾಟ್ ಹೊಡೆದೇ ಬಿಟ್ಟರು.
ಈ ಹೊಡೆತ ಸಿಕ್ಸರ್ ಆಗಬಹುದು ಎಂದು ಯಾರಿಗೂ ಗೊತ್ತಾಗಲೇ ಇಲ್ಲ. ಮಾಮೂಲು ಸ್ಟ್ರೇಟ್ ಡ್ರೈವ್ ನಂತೆ ಹೊಡೆದು ಬಿಟ್ಟರು. ಆದರೆ ಚೆಂಡು ಬಾನಂಗಳದಲ್ಲಿ ಹಾರಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಿತ್ತು. ಕಾಮೆಂಟರಿ ಹೇಳುತ್ತಿದ್ದವರೂ ಅರೆಕ್ಷಣ ದಂಗಾದರು. ನಂತರ ಅವರು ಹೊಡೆದ ಸ್ಟ್ರೇಟ್ ಡ್ರೈವ್ ಕೂಡಾ ಹೀಗೆಯೇ ಇತ್ತು. ಯಾರಿಗೂ ಆ ಹೊಡೆತದಲ್ಲಿ ಅಷ್ಟೊಂದು ಪವರ್ ಇರಬಹುದು ಎಂಬ ಊಹೆಯೂ ಇರಲಿಲ್ಲ. ಫೀಲ್ಡರ್ ಗಳೂ ಉಡಾಫೆ ಮಾಡಿದ್ದರು. ಆದರೆ ಚೆಂಡು ಬೌಂಡರಿ ಗೆರೆ ದಾಟಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ