ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಅಮೀರ್ ಖಾನ್ ಜತೆಗಿನ ಟಾಕ್ ಶೋ ಒಂದರಲ್ಲಿ ಕೊಹ್ಲಿ ಅನುಷ್ಕಾ ಬಗ್ಗೆ ಹೇಳಿಕೊಂಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಪ್ರಸಾರವಾಗಲಿರುವ ಖಾಸಗಿ ವಾಹಿನಿಯ ಟಾಕ್ ಶೋ ಒಂದರಲ್ಲಿ ಅಮೀರ್ ಖಾನ್, ಕೊಹ್ಲಿ ಸಂದರ್ಶನ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೀರ್ ಕೊಹ್ಲಿ ಬಳಿ ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಕೊಹ್ಲಿಯೂ ಖುಷಿಯಿಂದಲೇ ಇದಕ್ಕೆ ಉತ್ತರಿಸಿದ್ದಾರೆ ಎನ್ನಲಾಗಿದೆ.
ಅನುಷ್ಕಾರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟವಾಗದ ವಿಚಾರ ಯಾವುದು ಎಂದು ಅಮೀರ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ ಆಕೆ ನನ್ನ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಾಳೆ ಮತ್ತು ನನ್ನನ್ನು ಒಬ್ಬ ಮನುಷ್ಯನಾಗಿ ಮಾಡಿದ್ದಾಳೆ. ಅದು ನನಗೆ ಇಷ್ಟ ಎಂದಿದ್ದಾರೆ. ಇನ್ನು ಆಕೆ ಯಾವಾಗಲೂ ಸಮಯ ಪಾಲನೆ ಮಾಡುವುದಿಲ್ಲ. ಲೇಟಾಗಿ ಬರ್ತಾಳೆ ಎಂದು ಇಷ್ಟವಾಗದ ಗುಣವನ್ನು ಹೇಳಿದ್ದಾರಂತೆ. ಇನ್ನೂ ಹೆಚ್ಚಿನ ವಿಷಯ ಬೇಕಾದರೆ ದೀಪಾವಳಿವರೆಗೆ ಕಾಯಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ