ಚೆನ್ನೈ: ಆಸ್ಟ್ರೇಲಿಯಾ ಸರಣಿ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾದ ಖುಷಿಯಲ್ಲಿದ್ದರು. ಭಾರತ ಸಿಡ್ನಿಯಲ್ಲಿ ಟೆಸ್ಟ್ ಆಡುವ ದಿನ ಕೊಹ್ಲಿ ಪತ್ನಿ ಅನುಷ್ಕಾ ಜತೆ ಆಸ್ಪತ್ರೆಯಲ್ಲಿದ್ದರು.
ಆ ದಿನವನ್ನು ಕೊಹ್ಲಿ ನೆನೆಸಿಕೊಂಡಿದ್ದಾರೆ. ತಾನು ಪಿತೃತ್ವ ರಜೆಯಲ್ಲಿ ಮನೆಗೆ ಬಂದಿದ್ದರೂ ಕೊಹ್ಲಿ ತಂಡದೊಂದಿಗೆ ಕನೆಕ್ಟ್ ಆಗಿದ್ದರಂತೆ. ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಆಗಿದ್ದು ನನಗೆ ನೆನಪಿದೆ. ನಾವು ವೈದ್ಯರಿಗಾಗಿ ಆಸ್ಪತ್ರೆಯಲ್ಲಿ ಕಾಯುತ್ತಿದ್ದೆವು. ಆ ಸಂದರ್ಭದಲ್ಲಿ ಟೆಸ್ಟ್ ಪಂದ್ಯ ರೋಚಕತೆಯಲ್ಲಿತ್ತು. ಆಗಲೂ ನಾನು ಮೊಬೈಲ್ ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.